ಕೈಕಂಬ:ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ದಿ.ಭಾಸ್ಕರ ಸೇಮಿತ ಅವರ ಪುತ್ರ ಡಾ. ಭಾಸ್ಕರ ಸೇಮಿತ ಅವರು ರಂಗಮಂದಿರಕ್ಕೆ ಶಿಲಾನ್ಯಾಸಗೈದು ಶುಭಹಾರೈಸಿದರು.

1vmbhuthanatha

ಶ್ರೀಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರು ಈ ಸಂದರ್ಭದಲ್ಲಿ ಮಾತನಾಡಿ, `ನಮ್ಮ ಕ್ಷೇತ್ರದ ಸಮಾಜಪರ ಕನಸುಗಳಲ್ಲಿ ಇದೂ ಒಂದು. ಸಾಮಾಜಿಕ ಮಹತ್ವದ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳು ಅಲ್ಲದೆ ವಿವಾಹಾದಿ ಸಮಾರಂಭಗಳಿಗೂ ಇಲ್ಲಿ ಅವಕಾಶವಿದೆ. ಈಗಾಗಲೇ ಸಾವಿರಾರು ವಿಭಿನ್ನ ಪ್ರತಿಭೆಗಳು ಇದೇ ವೇದಿಕೆಯಿಂದ ಹೊರಜಗತ್ತಿಗೆ ಪರಿಚಯವಾಗಿದ್ದು, ಇನ್ನಷ್ಟು ಸಾಮಾಜಿಕ ಹಿತಚಿಂತನೆಯ ಕಾರ್ಯಗಳನ್ನು ಹಮ್ಮಿಕೊಳ್ಳುವ ಆಶಯವಿದೆ ಎಂದರು.

ಪ್ರೇಮಲತಾ ವಿ. ಶೆಟ್ಟಿ, ರಮೇಶ್ ಶೆಟ್ಟಿ ಮುಂಡಬೆಟ್ಟುಗುತ್ತು, ಹರಿಣಾಕ್ಷಿ ವಿಜಯನಾಥ ಶೆಟ್ಟಿ, ಶೈಲಿನಿ ಭಾಸ್ಕರ ಸೇಮಿತ, ಶ್ರೀಧರ ಭಂಡಾರಿ, ಶಂಕರ ಸೇಮಿತ, ಉದಯ ಕುಮಾರ್ ಶೆಟ್ಟಿ, ಅರ್ಜುನ್ ರೈ, ಹರಿಶ್ಚಂದ್ರ ಕರಂದ್ಲಾಜೆ, ಗುತ್ತಿಗೆದಾರ ವಿಶ್ವನಾಥ ಜೋಗಿ, ವಿನ್ಯಾಸಕಾರ ಚೇತನ್ ಕಾಮತ್, ದೇವಳದ ಆಡಳಿತ ಮಂಡಳಿ ಹಾಗೂ ಭಾರ್ಗವ ಮಿತ್ರವೃಂದದ ಸದಸ್ಯರು, ವಾಸು ಕೆ, ಸುಧಾರಾಮ್ ಪೂಂಜಾ ಉಪಸ್ಥಿತರಿದ್ದರು. ಕುಸುಮಾಕರ್ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *