ಕೈಕಂಬ : ಗಂಜಿಮಠ-ಕುಪ್ಪೆಪದವು-ಬಿ ಸಿ ರೋಡ್ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದ ಪ್ರದೇಶಕ್ಕೆ ಶನಿವಾರ ವಸತಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವು ಸೂಚನೆಗಳನ್ನು ನೀಡಿದರು. ಹಳೇ ಸೇತುವೆ ರಿಪೇರಿ ಮಾಡಲು ಆರು ಕೋಟಿ ರೂ. ಅಗತ್ಯವಿದ್ದು.
ಇಲ್ಲಿ ಹೊಸ ಸೇತುವೆ ನಿರ್ಮಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಮೂಲರಪಟ್ಣದಿಂದ ಕೊಳತ್ತಮಜಲಿಗೆ 5ಕಿಮೀ ತಾತ್ಕಾಲಿಕ ರಸ್ತೆ ನಿರ್ಮಿಸಿ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದ್ದು ಖಾಸಗಿಯವರ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸುವ ಭರವಸೆ ನೀಡಿದರು. ತೂಗುಸೇತುವೆಯಲ್ಲಿ ಮಕ್ಕಳಿಗೆ ನಡೆಯಲು ಭಯವಾಗುವುದಾದರೆ ಹೋಂ ಗಾರ್ಡ್ ನಿಯೋಜಿಸಲಾಗುವುದು, ತಕ್ಷಣದ ಸಂಪರ್ಕಕ್ಕೆ ಪ್ಯಾಸೆಂಜರ್ ಅಳವಡಿಸುವ ಬಗ್ಗೆ ತಿಳಿಸಿದರು. ಇಪ್ಪತೈದು ಮೀರಿದ ಸೇತುವೆಗಳನ್ನು ಪರಿಶೀಲಿಸಿ ಸುರಕ್ಷತೆ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಸೇತುವೆ ಮುರಿದ ಸ್ತಳ,ತೂಗುಸೇತುವೆ, ತೂಗುಸೇತುವೆವರೆಗಿನ ನೂತನ ರಸ್ತೆ, ಕೆಲಸ ತ್ವರಿತವಾಗಿ ಮುಗಿಸುವಂತೆ ಸೂಚಿಸಿದ್ದಾರೆಮುತ್ತೂರು ಶಾಲಾ ಕಾಲೇಜ್‍ಗೆ ಭೇಟಿ ನೀಡಿದರು.

