ಕಿನ್ನಿಗೋಳಿ:ಕಾಂಗ್ರೇಸ್ ಜೆಡಿಎಸ್ ಸರಕಾರ ಅಪವಿತ್ರ ಮೈತ್ರಿಯಾಗಿದ್ದು ಇದು ಶಾಶ್ವತ ಅಲ್ಲ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು ಅವರು ಕರ್ನಿರೆ ವಿಷ್ಣು ಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಜೆಪಿ ಬಳ್ಕುಂಜೆ ಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿ ಕಾಂಗ್ರೇಸ್ ಮತ್ತು ಜೆಡಿಎಸ್ ಅಧಿಕಾರದ ಹಂಚಿಕೆಯಲ್ಲಿಯೇ ಇದ್ದಾರೆ ಅಬಿವೃದ್ದಿ ಪರ ಚರ್ಚೆ ನಡೆಯುತ್ತಿಲ್ಲ ಮುಂದಿನ ಮೂರು ತಿಂಗಳ ಒಳಗೆ ಈ ಸರಕಾರ ಬಿದ್ದುಹೋಗಲಿದೆ, ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಯೋಜನೆಗಳಿಂದ ಗಮನ ಸೆಳೆಯುತ್ತಿದ್ದು ಜಗತ್ತನ್ನು ಭಾರತದೆಡೆ ತರುವ ಕೆಲಸ ಮಾಡುತ್ತಿದ್ದಾರೆ, ಯೋಗ ಭಾರತದ ಸಂಸ್ಕೃತಿಯಾಗಿದ್ದು ಅಂತರಾಷ್ಟ್ರೀಯ ಯೋಗ ದಿನದ ಮೂಲಕ 192 ದೇಶದಲ್ಲಿ ಯೋಗ ಮಹತ್ವವನ್ನು ಸಾರಿದ್ದಾರೆ, ಮುಂದಿನ ದಿನದಲ್ಲಿ ಕೆಂದ್ರ ಸರಕಾರದಿಂದ ಪ್ರತೀಯೊಂದು ಗ್ರಾಮ ಪಂಚಾಯತ್ ಗೆ ನೇರವಾಗಿ ಒಂದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಿದ್ದಾರೆ ಎಂದರು.
ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದೀರಿ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಲ್ಲಲ್ಲಿ ಅಧಿಕಾರಿಗಳ ಸಭೆ ಕರೆದು ಕೊಂದು ಕೊರತೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದರು ಈ ಸಂದರ್ಭ ಬಳ್ಕುಂಜೆ ಶಕ್ತಿ ಕೇಂದ್ರದ ವತಿಯಿಂದ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶರತ್ ಕುಬೆವೂರು, ಬಳ್ಕುಂಜೆ ಗಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್, ಸುಮಿತ್ರ ಎಸ್ ಕೋಟ್ಯಾನ್, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ರಾವ್, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲ್, ಕಾರ್ಯದರ್ಶಿ ಸುಕೇಶ್ ಶಿರ್ತಾಡಿ, ಸುದರ್ಶನ್, ಜಗದೀಶ್ ಅಧಿಕಾರಿ, ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ ಶೆಟ್ಟಿ, ದೇವಪ್ರಸಾದ್ ಪುನರೂರು, ಭುವನಾಭಿರಾಮ ಉಡುಪ ಬಳ್ಕುಂಜೆ ಪಂಚಾಯತ್ ಸದಸ್ಯರಾದ ನವೀನ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಮಮತಾ ಜಿ ಪೂಂಜ, ಜಯಲಕ್ಷೀ ಕರ್ನಿರೆ, ಆನಂದ್ ಕೊಲ್ಲೂರು, ಗ್ರಾಮ ಸಮಿತಿಯ ದಿನೇಶ್ ದೇವಾಡಿಗ, ಕಾರ್ಯದರ್ಶಿ ಯೋಗೀಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ ಸ್ವಾಗತಿಸಿ, ಪ್ರಣೇಶ್ ದೇಂದಡ್ಕ ನಿರೂಪಿಸಿದರು.
