ಕಿನ್ನಿಗೋಳಿ :ಕಾರ್ಯಕರ್ತರ ಶ್ರಮದ ಫಲವಾಗಿ ನಾನು ಇವತ್ತು ಜಯಗಳಿಸಿದ್ದೇನೆ ಸನ್ಮಾನ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಜೂ. 24 ರಂದು ಐಕಳ ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಐಕಳ ಬಿಜೆಪಿ ಗ್ರಾಮ ಸಮಿತಿಯ ಕಾರ್ಯಕರ್ತರ ಆಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಿಗೆ ಅಧಿಕಾರಿ ವರ್ಗದಿಂದ ತೊಂದರೆ ಆಗಬಾರದು ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಗೊಮ್ಮೆ ಆಧಿಕಾರಿ ಹಾಗೂ ಜನಸಂಪರ್ಕ ಸಭೆ ನಡೆಸಿ ಸರಕಾರದ ವಿವಿಧ ಯೋಜನೆಯ ಅರ್ಜಿ ವಿಲಾವೇರಿ ಮಾಡಲಾಗುವುದು ಹಾಗೂ ಕ್ಷೇತ್ರದಲ್ಲಿನ ಸಮಸ್ಯೆಯ ಬಗ್ಗೆ ನನಗೆ ಕಾರ್ಯಕರ್ತರು ತಿಳಿಸಬೇಕು ನಮ್ಮ ಪಕ್ಷದ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಸದಸ್ಯರು ಇದ್ದಾರೆ ಅವರ ಜೊತೆ ಸೇರಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ಜಿ. ಪಂ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಕಿನ್ನಿಗೋಳಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ , ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ದೈವಸ್ಥಾನದ ಅಧ್ಯಕ್ಷ ರಘರಾಮ ಆಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿದರು.
