11btl-Lic

ಬಂಟ್ವಾಳ: ಕಳೆದ 60 ವರ್ಷಗಳ ಹಿಂದೆ ಆರಂಭಗೊಂಡು ಪ್ರಸಕ್ತ ಜಗತ್ತಿನಲ್ಲೇ ಬಹು ದೊಡ್ಡ ವಿಮಾ ಸಂಸ್ಥೆಯಾಗಿ ರೂಪುಗೊಂಡ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಈ ದೇಶದಲ್ಲಿ ಪ್ರತೀ ಕುಟುಂಬಗಳ ಸದಸ್ಯರಿಗೂ ಯಾವುದೇ ಜಾತಿ, ಧರ್ಮ ಮತ್ತು ಭಾಷೆಗಳ ತಾರತಮ್ಯ ಇಲ್ಲದೆ ಜೀವ ವಿಮೆ ನೀಡುವುದರ ಜತೆಗೆ ಅವರಿಗೆ ಕೌಟುಂಬಿಕ ಆರ್ಥಿಕ ರಕ್ಷಣೆ ನೀಡುವ ಮೂಲಕ ಪುಣ್ಯ ಸಂಪಾದನೆ ಮತ್ತು ಬಲಿಷ್ಠ ರಾಷ್ಟ್ರ ನಿಮರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಎಲ್ಲೈಸಿ ಉಡುಪಿ ವಿಭಾಗದ ಮಾರುಕಟ್ಟೆ ಅಧಿಕಾರಿ ವೆಂಕಟರಮಣ ಶೀರೂರು ಹೇಳಿದ್ದಾರೆ.

ತಾಲೂಕಿನ ಬಿ.ಸಿ.ರೋಡು ಹೋಟೆಲ್ ಕೃಷ್ಣಿಮಾ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿ ಬಳಗದ ವತಿಯಿಂದ ರವಿವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳ ಉಪ ಶಾಖಾಧಿಕಾರಿ ಮಧುಸೂದನ್ ಮಾತನಾಡಿ, ಪ್ರತಿನಿಧಿಗಳಿಗಾಗಿ ಸಂಸ್ಥೆಯು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ ಎಂದರು.

ಹಿರಿಯ ಪ್ರತಿನಿಧಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮಹಾಬಲ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ವಿಮಾ ಕ್ಷೇತ್ರದ ಸಾಧನೆಗಾಗಿ ಸತ್ಯನಾರಾಯಣ ರೈ, ರೋಹಿದಾಸ್ ಕುಂದರ್, ಗಂಗಾಧರ ಕಲ್ಲಡ್ಕ, ಲೋಕೇಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ತರಬೇತಿ: ಸಭಾ ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಮಟ್ಟದ ಜೇಸಿ ತರಬೇತುದಾರ ಜಯಾನಂದ ಪೆರಾಜೆ ಇವರಿಂದ ‘ಯಶಸ್ವಿ ನಾಯಕನ ಗುಟ್ಟು’ ಮಾಹಿತಿ ಕಾರ್ಯಾಗಾರ ಮತ್ತು ಪ್ರತಿನಿಧಿಗಳಿಂದ ರಸಪ್ರಶ್ನೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿನಿಧಿ ನವೀನ್ ಕೊಡ್ಮಾಣ್ ಅನಿಸಿಕೆ ವ್ಯಕ್ತಪಡಿಸಿದರು. ನೋಟರಿ ವಕೀಲ ಚಂದ್ರಶೇಖರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಪ್ರತಿನಿಧಿಗಳಾದ ನಾರಾಯಣ ಅಮೀನ್ ವಂದಿಸಿದರು. ಭವಾನಿ ಮತ್ತು ರಮೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

11btl-Shriyan Sanmana

11btl-Peraje

 

 

 

By Suddi9

Leave a Reply

Your email address will not be published. Required fields are marked *