ಬಜ್ಪೆ: ಬಜ್ಪೆಯ ತೊಟ್ಟಿಲಗುರಿ ದುರಂತಕ್ಕೆ ಸಂಬಧಪಟ್ಟಂತೆ ವಸತಿ ಕಳೆದುಕೊಂಡ ನಿರ್ವಸಿತರಿಗೆ ನೂತನ ಮನೆ ಕಟ್ಟಿಕೊಡಲು ಪುನರ್ವಸತಿ ಯೋಜನೆಗೆಂದು ಪೊಕರ್ೋಡಿಯಲ್ಲಿ ಜು28ರ ಶಿಲನ್ಯಾಸ ನೆರವೇರಿತು. ಈ ಕಾರ್ಯಕ್ರಮವನ್ನು ಸಚಿವರಾದ ಅಭಯ್ ಚಂದ್ರ ಜೈನ್ ನೆರವೇರಿಸಿದರು.

ನಂತರ ಮಾತಾಡಿದ ಸಚಿವ ಅಭಯಚಂದ್ರ ಜೈನ್, ನಿರಾಶ್ರಿತರ ಕಾಲೊನಿಗೆ ಮೂಲ ಸೌಕರ್ಯ ನೀಡಲು ವಿಶೇಷ ಆದ್ಯತೆ ನೀಡಲಾಗುವುದು, ನಿರಾಶ್ರಿತ ವಸತಿ ಯೋಜನೆಗೆ ಅನುದಾನದ ಕೊರತೆ ಬಂದರೆ ಸರಕಾರದ ಗಮನವನ್ನು ತರಲಾಗುವುದು, ಮೂಲಭೂತ ಸೌಕರ್ಯ ಒದಗಿಸಲು ಸರಕಾರ ವಿಶಷ ಆದ್ಯತೆ ವಹಿಸಲಿದ್ದು, ಈ ಬಗ್ಗೆ ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವರಲ್ಲಿ ಕಾಲೊನಿಯ ನಿವಾಸಿಗಳ ಬಗ್ಗೆ ಗಮನಹರಿಸುವಂತೆ ಕೇಳಲಾಗುವುದು. ಸ್ಇಝಡ್ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿ ಅವರ ಸಹಕಾರವನ್ನೂ ಕೋರಲಾಗುವುದು. ಎಲ್ಲಾ ಕುಟುಂಗಳಿಗೆ ಮನೆ ನಿಮರ್ಿಸಲು ಸಾಮೂಹಿಕವಾಗಿ ಚಾಲನೆ ನೀಡಿ ಆದಷ್ಟು ಬೇಗ ಮನೆ ನಿಮರ್ಿಸಿ ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ನುಡಿದರು.
ಬಳಿಕ ಮಾತಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತಾಡನಾಡಿ, ಈಗಾಗಲೇ ಮನೆ ನಿಮರ್ಾಣ ವಾಗಬೇಕಿತ್ತು. ಈ ಮಧ್ಯೆ ಕೊಂಚ ಗೊಂದಲ ಆಗಿತ್ತು. ಇಷ್ಟು ಸಮಯದಿಂದ ಚಿಕ್ಕ ಮನೆಯಲ್ಲಿ ಯಮಯಾತನೆ ಪಡುತ್ತಿದ್ದ ನಿರ್ವಸಿತ ಎಲ್ಲಾ ಕುಟುಂಬಗಳಿಗೆ ಸಾಮೂಹಿಕವಾಗಿ ನಿಮರ್ಿಸಿ ಕೊಡಲು ಪ್ರಯತ್ನಿಸಲಾಗುವುದಷ್ಟೇ ಅಲ್ಲದೆ ಯಾವುದೇ ವಿಘ್ನಗಳು ಬಾರದಂತೆ ನೋಡುವುದು ನಮ್ಮ ಪ್ರಾರ್ಥನೆಯಾಗಿದೆ ಎಂದು ಅವರು ನುಡಿದರು.
ನಂತರ ಮಾಯಾಡಿದ ಜಿಲ್ಲಾ ಪಂಚಾಯತ್ ಸಿಇಒ ತುಳಸಿ ಮದ್ದಿನೇನಿ ಮಾತಾಡಿ, ಪ್ರತೀ ಮನೆಗೆ 2.25ಲಕ್ಷರೂ ಖಚರ್ು ತಗಲುತ್ತದೆ. ಕೇಂದ್ರದ ಇಂದಿರಾ ಆವಾಸ್ ವಸತಿ ಯೋಜನೆಯಂತೆ 1.25ಲಕ್ಷ ರೂ.ಮೀಸಲಿಡಲಾಗಿದೆ. ಇದರಲ್ಲಿ 25 ಸಾವಿರ ಹಣವನ್ನು ಬಜ್ಪೆ ಪಂಚಾಯತ್ ಒದಗಿಸಲಿದೆ. ಅದಾಗ್ಯೂ 75 ಸಾವಿರ ರೂ ಕೊರತೆ ಬರಲಿದ್ದು, ಅದನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಮನೆಕಳೆದುಕೊಂಡವರನ್ನೇ ಕೆಲಸಕ್ಕೆ ನಿಯೋಜಿಸಿ ಬಾಕಿ ಉಳಿದ ಮೊತ್ತವನ್ನು ಭರಿಸಲಾಗುವುದು ಎಂಬ ಮಹತ್ವದ ಮಾಹಿತಿಯನ್ನು ನೀಡಿದರು.

28 bajpe 3

28 bajpe 1

28 bajpe 2
ಅಲ್ಲದೆ ನಿರಾಶ್ರಿತರಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಂರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷರಾದ ಸತೀಶ್ ಕುಂಪಲ, ತಾ.ಪಂ ಸದಸ್ಯ ಜೋಕಿಂ ಡಿ;ಕೋಸ್ತ, ಮಾಜಿ ಜಿ.ಪಂ ಸದಸ್ಯ ರಿತೇಶ್ ಶೆಟ್ಟಿ, ಬಜ್ಪೆ ಗ್ರಾ.ಪಂ ಅಧ್ಯಕ್ಷ ಪ್ರದೀಪ್ ಸುವರ್ಣ, ಬಾಲಕೃಷ್ಣ ಸುವರ್ಣ, ಲೋಕೇಶ್, ಚಂದಪ್ಪ ಸುವರ್ಣ, ಮೀನಾಕ್ಷಿ, ಮಂಜುನಾಥ, ಪಿಡಿಓ ಸದಾನಂದ, ದಲಿತ ಮುಖಂಡ ಚಂದಪ್ಪ ಮತ್ತಿತರರು ಉಪಸ್ಥಿತರಿದ್ದರು.
2013ರ ಜೂನ್ 18ರ ಮಧ್ಯರಾತ್ರಿ ಜೋರು ಮಳೆಗೆ ಬಜ್ಪೆಯ ದೈತ್ಯ ಕಟ್ಟಡದಲ್ಲಿ ಮರೆಯಾಗಿ ಗುಡಿಸಲು ಕಟ್ಟಿದ್ದ ದಲಿತರ ಜೋಪಡಿಗಳು ಕುಸಿದುಬಿದ್ದು ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಇದರಿಂದ ಇಲ್ಲಿನ 18 ದಲಿತ ಕುಟುಂಬಗಳು ಬೀದಿಗೆ ಬಂದಿದ್ದವು.
ಅಲ್ಲಿಂದ ಇಲ್ಲಿನವರಗೆ ಬಜ್ಪೆ ಗ್ರಾಮ ಪಂಚಾಯತ್ನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಜೀವನ ಸಾಗಿಸುತ್ತಾ ಬಂದಿದ್ದಾರೆ.
ನಿರಾಶ್ರಿತರಿಗೆ ಪೊಕರ್ೋಡಿ ಸಮೀಪದಲ್ಲಿ ನಿರ್ಣಯದಂತೆ ಗಡಿಗುರುತು ಹಾಕಲಾಗಿ ಜಿಪಿಎಸ್ ಪ್ರಕ್ರಿಯೆ ಅಂತಿಮಗೊಂಡಿದ್ದರೂ, ನಿರಾಶ್ರಿತ ದಲಿತರು ಮಾತ್ರ ಅಲ್ಲಿ ವಾಸಿಸಲು ಒಪ್ಪಿಗೆ ನೀಡಿರಲಿಲ್ಲ.
ತಮಗೆ ಬಜ್ಪೆ ಪೊಲೀಸ್ಠಾಣೆಯ ಸಮೀಪ ಮನೆಮಾಡಿಕೊಡಬೇಕು, ಪೊಕರ್ೋಡಿಯಲ್ಲಿ ಮೂಲಭೂತ ಸಮಸ್ಯೆ ಇದೆ ಎಂದು ನಿರಾಶ್ರಿತರ ಪೈಕಿ ಕೆಲವು ಮಂದಿ ಪೊಕರ್ೋಡಿ ಜಾಗಕ್ಕೆ ಅಸಮ್ಮತಿ ಸೂಚಿಸಿದ್ದರು. ಅನಕ್ಷರಸ್ಥ ದಲಿತರನ್ನು ದಿಕ್ಕುತಪ್ಪಿಸಿದ್ದ ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು, ಭೂಮಾಫಿಯಾ, ಹಾಗೂ ಅಕ್ರಮ ಕಟ್ಟಡಗಳ ಹಿಂದಿರುವವರ ರಾಜಕೀಯ ಚದುರಂಗದಾಟದಿಂದಾಗಿ ನಿರ್ವಸಿತರಿಗೆ ಮನೆ ನಿಮರ್ಿಸುವ ಕೆಲಸಕ್ಕೆ ಬರೋಬ್ಬರಿ ಒಂದೂವರೆ ವರ್ಷ ತಡೆಯುಂಟಾಗುತ್ತಾ ಬಂದಿತ್ತು.

By suddi9

Leave a Reply

Your email address will not be published. Required fields are marked *