ಬಜ್ಪೆ: ಅಕ್ರಮ ಮರಳು ಅಡ್ಡೆಗೆ ಬಜ್ಪೆ ಠಾಣಾ ಪೊಲೀಸರು ದಾಳಿ ನಡೆಸಿ 32 ಲೋಡ್ ಮರಳನ್ನು ವಶಪಡಿಸಿಕೊಂಡ ಘಟನೆ ಇಲ್ಲಿನ ಮೂಳೂರು ಗ್ರಾಮದ ಬೈಲು ಪೇಟೆ ರಸ್ತೆಯ ಮರಂಕರಿಯ ಎಂಬಲ್ಲಿ ನಡೆದಿದೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ತೆಗೆದು ದಾಸ್ತಾನಿರಿಸಿದ್ದ 32 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ನಿರೀಕ್ಷಕ ಎಸ್ . ಪರಶಿವಮೂರ್ತಿ, ಎಎಸೈ ರಾಮಚಂದ್ರ, ಸಿಬ್ಬಂದಿಗಳಾದ ರಾಜೇಶ್, ಅಬ್ಬುಸಾಲಿ ಇದ್ದರು.

