ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪ್ಟಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಎರಡನೇ ಹಂತದಲ್ಲಿ ಧರ್ಮಗುರು ದಿ. ಹ್ಯಾರಿ ರಸ್ಕಿನ್ಹಾರ ಸ್ಮರಣಾರ್ಥ ಮಳಲಿಯ ನಾಡಾಜೆ ಬಾಕಿಮಾರ್ ಮತ್ತು ಜೋಡುತಡಮೆ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ 75 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.gur-may-24-kit

ಈ ಸಂದರ್ಭದಲ್ಲಿ ಹ್ಯಾರಿಯವರ ಅಳಿಯ ಶೆಚೆರಿ ವಾರ್ನರ್, ತಾಪಂ ಮಾಜಿ ಸದಸ್ಯ ಜಿ ಸುನಿಲ್, ಜನಾರ್ದನ ಪೂಜಾರಿ, ಧರ್ಮಗುರುಗಳಾದ ಗುರುರಾಜ್, ನವೀನ್ ರೆಬೆಲ್ಲೊ ಹಾಗೂ ಸಂತೋಷ್ ಅವಿನಾಶ್, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು. ಮೇ 22ರಂದು ಇದೇ ಪ್ರದೇಶದ 100 ಬಡ ಕುಟುಂಬಗಳಿಗೆ ಟ್ರಸ್ಟ್ ಆಹಾರ ಕಿಟ್ ವಿತರಿಸಿತ್ತು.

By Suddi9

Leave a Reply

Your email address will not be published. Required fields are marked *