ವಾಮಂಜೂರು : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂಡುಶೆಡ್ಡೆ ಜಾರದಲ್ಲಿ ರಸ್ತೆ ಬದಿಯ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದ್ದು, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೇತೃತ್ವದ ಜನಪ್ರತಿನಿಧಿಗಳು ಮತ್ತು ಇಲಾಖೆ ಇಂಜಿನಿಯರ್ ಮಳೆಹಾನಿ ಪ್ರದೇಶ ವೀಕ್ಷಿಸಿದರು.
ಹೊಸ ಮನೆ ಪಕ್ಕದ ರಸ್ತೆಗೆ ನಿರ್ಮಿಸಲಾದ ತಡೆಗೋಡೆ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಮನೆಗೆ ಆತಂಕದ ಸ್ಥಿತಿ ಎದುರಿಸುವಂತಾಗಿದೆ. ಪಂಚಾಯತ್ ವತಿಯಿಂದ ಈ ರಸ್ತೆ ತಡೆಗೋಡೆ ದುರಸ್ತಿ ಮಾಡುವುದಾಗಿ ಮನೆಯವರಿಗೆ ಅಧ್ಯಕ್ಷರು ಭರವಸೆ ನೀಡಿದರು.
