ಕುಪ್ಪೆಪದವು: ದ್ವಿಚಕ್ರ ವಾಹನವೊಂದರಲ್ಲಿ  ಏಕಾಏಕಿ ರಸ್ತೆ ಮದ್ಯೆಯೇ ಬೆಂಕಿ ಕಾಣಿಸಿಕೊಂಡು ಕ್ಷಣದಲ್ಲಿಯೇ ಸುಟ್ಟುಹೋದ ಘಟನೆಯೊಂದು ಎಡಪದವು ಬಳಿ ಸೋಮವಾರ ಅಪರಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.20200615_184449

ಸೂರಲ್ಪಾಡಿಯ ವ್ಯಕ್ತಿಯೋರ್ವರು ತಮ್ಮ ದ್ವಿಚಕ್ರ ವಾಹನದಲ್ಲಿ ಎಡಪದವಿನಿಂದ ಗಂಜಿಮಠದತ್ತ ಹೋಗುತ್ತಿದ್ದಾಗ ಎಡಪದವು ಕುಕ್ಕುದನೆ ಎಂಬಲ್ಲಿ ವಾಹನದಲ್ಲಿ ಏಕಾಏಕಿ ಹೋಗೆ ಕಾಣಿಸಿಕೊಂಡಿತ್ತು, ತಕ್ಷಣ ಸವಾರ ವಾಹನವನ್ನು ನಿಲ್ಲಿಸಿದರು. ತಕ್ಷಣವೇ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಪೆಟ್ರೋಲ್ ಟ್ಯಾಂಕ್ ಮತ್ತು ಟಯರ್ ಗಳು ಬೆಂಕಿಗೆ ಸಿಡಿದು ಇಡೀ ವಾಹನ ಉರಿದಿದೆ.   ವಾಹನ ಸವಾರನಿಗೆ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ  ಯಾವುದೇ ದೂರು ದಾಖಲಾಗಿಲ್ಲ.

By suddi9

Leave a Reply

Your email address will not be published. Required fields are marked *