ಕೋಲಾರ : ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಹಾಗೂ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಜಿಲ್ಲಾಧಿಕಾರಿಗಳು ನೇರವಾಗಿ ನಗರದ ಎಸ್.ಎನ್.ಆರ್. ಆಸ್ಪತ್ರೆಗೆ ಭೇಟಿ ನೀಡಿ ಒಳರೋಗಿಗಳನ್ನು ಕುರಿತು ನಿಮಗೆಲ್ಲಾ ಆರೋಗ್ಯ ಭಾಗ್ಯ ನೀಡಿ ಬೇಗ ಗುಣಮುಖರಾಗಿ ಎಂದು ಹಾರೈಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ವಾಸವಿ ಕ್ಲಬ್ ಮತ್ತು ಜಿಲ್ಲಾಢಳಿತ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ಹಂಚುವ ಕಾರ್ಯಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಲವಾರು ರೋಗಿಗಳ ಕ್ಷೇಮ ಸಮಾಚಾರಗಳನ್ನು ಕುದ್ದಾಗಿ ವಿಚಾರ ವಿನಿಮಯ ಮಾಡಿದ್ದು, ಸಾರ್ವಜನಿಕರನ್ನು ಮೂಕ ವಿಸ್ಮಯರಾಗಿಸಿದರು.
ವಾ|| ವಿ.ಪಿ.ಸೋಮಶೇಖರ್ ಮಾತನಾಡಿ ಜಿಲ್ಲಾಧಿಕಾರಿಗಳಿಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ರೋಗಿಗಳ ಕ್ಷೇಮ ಸಮಾಚಾರ ವಿಚಾರಿಸಿರುವುದು ಅವರ ಸಹೃದಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ನಾರಾಯಣಸ್ವಾಮಿ ಸಿಬ್ಬಂದಿ ವರ್ಗ, ಆಹಾರ ಸರಬರಾಜು ಇಲಾಖಾಧಿಕಾರಿ ಸುಬ್ರಮಣಿ ಹಾಗೂ ವಾಸವಿ ಕ್ಲಬ್‍ನ ಬಿ.ಪಿ. ಓಂಪ್ರಕಾಶ್, ಬಿ.ಆರ್. ಅಮರನಾಥ್, ವೆಂಕಟಲಕ್ಷ್ಮಮ್ಮ ಮುಂತಾದವರು ಪಾಲ್ಗೊಂಡಿದ್ದರು.ವಾಸವಿ ಕ್ಲಬ್ ವತಿಯಿಂದ ತಾಲ್ಲೂಕಿನ ಕಾಮದೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ವಾಸವಿ ಕ್ಲಬ್ ವಲಯಾಧಿಕಾರಿ ಓಂ ಪ್ರಕಾಶ್ ಮತ್ತು ಅಧ್ಯಕ್ಷರಾದ ಬಿ.ಆರ್. ಅಮರ್‍ನಾಥ್ ಶಾಲೆಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲಾ ಶಾಲಾ ಮಕ್ಕಳಿಗೂ ಲೇಖನಿ ಸಾಮಗ್ರಿಗಳು ಹಾಗೂ ಇಂಗ್ಲೀಷ್ ನಿಘಂಟು ವಿತರಣೆ ಮಾಡಿದರು. ನಗರದ ಅಂತರಗಂಗಾ ಬುದ್ಧಿಮಾಂಧ್ಯ ವಸತಿ ಶಾಲೆಗೂ ಬೇಟಿ ನೀಡಿ ಹಣ್ಣು ವಿತರಣೆಗಳನ್ನು ಮಾಡಲಾಯಿತು.
