ಕೈಕಂಬ: ಎಡಪದವಿನಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಕೈಕಂಬದಿಂದ ಕುಪ್ಪೆಪದವಿಗೆ ಹೋಗುತ್ತಿದ್ದ ಕ್ರೆಟ್ಟ ಕಾರ್ಗೆ ಗುದ್ದಿದ ಪರಿಣಮ ಕಾರ್ ಜಖಂ ಗೊಂಡ ಘಟನೆ ಕೈಕಂಬ ಸಮೀಪದ ರಾಮನಗರ ಎಂಬಲ್ಲಿ ಶನಿವಾರ ನಡೆದಿದೆ.

ಟಿಪ್ಪರ್ ಕೈಕಂಬದ ಕಡೆಗೆ ಬರುತ್ತಿದ್ದ ಟಿಪ್ಪರ್ನ ಟಯರೆಂಡ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಲಭಾಗಕ್ಕೆ ತಿರುಗಿ ಎದುರಿನಿಂದ ಬಂದ ಕಾರಿಗೆ ಗುದ್ದಿದ ಪರಿಣಾಮ ಕಾರಿನ ಮುಂಬಾಗ ಜಖಂಗೊಂಡಿದೆ.
ಕಾರಿನಲ್ಲಿ ಮಹಿಳೆ ಮಗು ಸಹಿತ ನಾಲ್ವರು ಪ್ರಯಾಣಿಸುತ್ತಿದ್ದರು. ಯಾವುದೇ ಅಪಾಯ ಸಭವಿಸಿಲ್ಲ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದ್ದು ಬಜಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.
