ಕೈಕಂಬ: ಬಸ್ಸೊಂದರ ಮೈನ್ ಪ್ಲೇಟ್ ತುಂಡಾದ ಪರಿಣಾಮ ಸಂಭವಿಸಬಹುದಾದ ಭಾರೀ ಅನಾಹುತವೊಂದು ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಸಮೀಪದ ಕಾಂಜಿಲಕೋಡಿ ನೂಯಿ ಎಂಬಲ್ಲಿ ಗುರುವಾರ ನಡೆದಿದೆ.

12vpbus

ಪೊಳಲಿಯಿಂದ ಕೈಕಂಬ ಕಡೆಗೆ ತೆರೆಲುತ್ತಿದ್ದ ಖಾಸಾಗಿ ಬಸ್ ಕಾಂಜಿಲಕೋಡಿ ನೂಯಿ ಸಮೀಪ ಬರುತ್ತಿದ್ದಂತೆ ಮೈನ್ ಪ್ಲೇಟ್ ತುಂಡಾಗಿ ನಿಯಂತ್ರಣ ಕಳೆದುಕೊಂಡಿದ್ದರಿಂದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಬೇಕಿದ್ದನ್ನು ತಪ್ಪಿಸಿ ರಸ್ತೆ ಪಕ್ಕದ ಧರೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದರೆ ಭಾರೀ ಅನಾಹುತ ನಡೆಯುತ್ತಿತ್ತು. ಅಲ್ಲದೆ, ಪೊಳಲಿ ಜಾತ್ರೆ ನಡೆಯುತ್ತಿದ್ದರಿಂದ ವಾಹನಗಳು ಹಾಗೂ ಬಸ್ ನಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗಿತ್ತು. ಬಸ್ಸು ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

 

By Suddi9

Leave a Reply

Your email address will not be published. Required fields are marked *