
ಉಡುಪಿ: ನಮೋ ಎಂದರೆ ಕಾಂಗ್ರೆಸ್ ಪಾಲಿಗೆ ಮೋಸ ಎಂದು ಅನ್ನಿಸಬಹುದು. ಆದರೆ ದೇಶಾದಾದ್ಯಂತ ಸಾಮಾನ್ಯ ಜನರ ಪಾಲಿಗೆ ಇದು ಮೋದಕ ಎಂದು ವಿಧಾನ ಪರಿಷತ್ ಸದಸ್ಯ, ಕೋಟ ಶ್ರೀನಿವಾಸ್ ಪೂಜಾರಿ ಸಚಿವ ಪ್ರಮೋದ್ ಮದ್ವರಾಜ್ ರಿಗೆ ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿಯ ಎಂದರೆ ನಮಗೆ ಮೋಸ ಎಂದು ಕಾಂಗ್ರೆಸ್ ಸಭೆಯಲ್ಲಿ ವ್ಯಂಗ್ಯವಾಡಿದ ಸಚಿವ ಪ್ರಮೋದ್ ಮದ್ವರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಅನಂತರ ಭಾರತ ದೇಶದಾದ್ಯಂತ ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದೇಶದ ಜನಸಾಮಾನ್ಯರು ಸಂತೃಪ್ತರಾಗುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿನಮೋ ಶಕ್ತಿ ಎನು ಎಂಬುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಚಿವ ಪ್ರಮೋದ್ ಮಧ್ವರಾಜ್ ಗೂ ಚೆನ್ನಾಗಿಯೇ ತಿಳಿಯಲಿದೆ ಎಂದರು.
