ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಮೊಹ್ಮದ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ವಜಾಗೊಳಿಸಿದೆ.
ನಲಪಾಡ್ ಜಾಮೀನು ಅರ್ಜಿ ಕುರಿತಂತೆ ಮಾರ್ಚ 12 ರಂದು ಕೊನೆಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ್, ಅರ್ಜಿ ಮೇಲಿನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು.
ಬುಧವಾರ ಮಧ್ಯಾಹ್ನ ಈ ಕುರಿತಂತೆ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ಹೇಳಿದರು.
ಈ ಹಿಂದೆ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕ್ತಗೊಂಡ ನಂತರ, ನಲಪಾಡ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.
ನಲಪಾಡ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಸಿ.ವಿ. ನಾಗೇಶ ಅವರು, ಇದೊಂದು ಆಕಸ್ಮಿಕ ಘಟನೆ. ನಲಪಾಡ್ ಉದ್ದೇಶಪೂರ್ವಕವಾಗಿ ವಿದ್ವತ್ ಮೇಲೆ ಹಲ್ಲೆ ನಡೆಸಿಲ್ಲ. ಹಲ್ಲೆಗೆ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ. ಕುಡಿದ ಮತ್ತಿನಲ್ಲಿ ಆದ ಅವಘಡ ಅಷ್ಟೇ. ಅದಕ್ಕಾಗಿ ನಲಪಾಡ್ ಗೆ ಜಾಮೀನು ನೀಡಬೇಕು ಎಂದು ಒತ್ತಾಯಿಸಿದ್ದರು.
ಸರಕಾರದದ ಪರವಾಗಿ ಪ್ರತಿವಾದ ಮಂಡಿಸಿದ್ದ ಶ್ಯಾಮಸುಂದರ ಜಾಮೀನು ನೀಡಿಕಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

