ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಇತರ ಆರು ಆರೋಪಿಗಳನ್ನು ಬುಧವಾರ ಕಬ್ಬನ ಪಾರ್ಕ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ವಿಚಾರಣೆ ಅವಧಿ ಮುಗಿದ ಹಿನ್ನಲೆ ಕಬ್ಬನ್ ಪಾರ್ಕ್ ಪೊಲೀಸರು ಮಧ್ಯಹ್ನ ಮೂರು ಗಂಟೆ ಬಳಿಕ 8 ನೇ ಎಸಿಎಂಎಂ ಕೋರ್ಟ್ ಗೆ ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ.ಸಿಬಿಐ ಅಧಿಕಾರಿಗಳು ರಾತ್ರಿ 1 ಗಂಟೆ ವರೆಗೆ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಜಾಮೀನಿಗೆ ಅರ್ಜಿ: ನಾಲಪಾಡ್ ಸೇರಿ ಇತರ ಆರು ಆರೋಪಿಗಳು ಕೂಡ ಜಾಮೀನಿಗೆ ಅರ್ಜಿಸಲ್ಲಿಸಿದ್ದು, ವಿದ್ವತ್ ಮೇಲೆ 15 ಜನ ಹಲ್ಲೆ ನಡೆಸಿದ್ದಾರೆ. ನಲಪಾಡ್ ಹಲ್ಲೆ ನಡೆಸಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನಲಪಾಡ್ ಪರ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯೂ ಇಂದು ಮಧ್ಯಾಹ್ನ ಮೂರರ ನಂತರ ನಡೆಯಲಿದೆ.

