ಬಂಟ್ವಾಳ : ಪಂಜಿಮೊಗರು ಜೋಡಿ ಕೊಲೆ, ಬಂಟ್ವಾಳ ಶಿವಪ್ಪ ಬಂಗೇರ, ಶರತ್ ಕೊಲೆ,ಮೂಡಬಿದ್ರೆ ಕಾವ್ಯ ಸಾವು ಪ್ರಕರಣದ ಆರೋಪಿಗಳನ್ನುಬಂಧಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಯಿತು. 

ಇತ್ತೀಚೆಗೆ ಮೂಡಬಿದಿರೆಯ ಕಾವ್ಯ ಮತ್ತು ಪಂಜಿಮೊಗರು ನಲ್ಲಿ ನಡೆದ ಜೋಡಿ ಕೊಲೆಯ ಆರೋಪಿಗಳ ಮತ್ತು ಬಂಟ್ವಾಳ ದಲ್ಲಿ ನಡೆದ ಶಿವಪ್ಪ ಕೊಲೆ ಪ್ರಕರಣಗಳ ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸರು ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು. ಹಾಗೆಯೇ ಶರತ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಅರೋಪಿಗಳ ಶೀಘ್ರವಾಗಿ ಬಂಧನವಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.ದಲಿತ ಮುಖಂಡರಾದ ಭಾನುಚಂದ್ರ ಕ್ರಷ್ಣಾಪುರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.ರಾಜ ಪಲ್ಲಮಜಲು,ಸೇಸಪ್ಪ ಬೆದ್ರಕಾಡು,ಸತೀಶ ಅರಳ,ದಿ. ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಮೊದಲಾದವರಿದ್ದರು
