ಬಂಟ್ವಾಳ: ಇಲ್ಲಿನ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರು ರಾಜೀನಾಮೆಯನ್ನು ಸಂಘದ ಕಾರ್ಯಕಾರಿ ಸಮಿತಿ ತಿರಸ್ಕರಿಸಿದ್ದು ಮುಂದಿನ ಅವಧಿಯವರೆಗೆ ಅವರನ್ನೇ ಮುಂದುವರಿಸಲು ನಿರ್ಣಯ ಕೈಗೊಂಡಿದೆ. ಕಳೆದ ಹಲವು ವರ್ಷಗಳಿಂದ ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸೇಸಪ್ಪ ಕೋಟ್ಯಾನ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪತ್ರ ನೀಡಿದ್ದರು. ಅದರೆ ಭಾನುವಾರ ಈ ಬಗ್ಗೆ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಕರೆದು ಚರ್ಚಿಸಿ  ಸಂಘದ ಎಲ್ಲಾ ಸದಸ್ಯರ ಅಪೇಕ್ಷೆಯಂತೆ  ಅವರನ್ನೇ ಮುಂದಿನ ಅವಧಿಯವರೆಗೆ ಅಧ್ಯಕ್ಷರಾಗಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *