ಬಂಟ್ವಾಳ: ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸೇವಾ ಸಮಿತಿ ರಚನೆಯ ಸಭೆಯು ಮೆಲ್ಕಾರ್ ನಲ್ಲಿ ನಡೆಯಿತು. ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಶೀರ್ವಚನ ನೀಡಿ ದೇಶದ ಒಟ್ಟು ಆರು ಸ್ಥಳಗಳಲ್ಲಿ ಶಾಖಾ ಮಠಗಳುಕಾರ್ಯಾಚರಿಸುತ್ತಿದೆ.ಅಲ್ಲೂ ಇದೇ ಮಾದರಿಯಲ್ಲಿ ಸಮಿತಿ ರಚಿಸಲಾಗುತ್ತಿದೆ.
ಸಮಾಜದ ಎಲ್ಲಾ ವರ್ಗದವರಿಗೂ ನಮ್ಮ ಮಠದಲ್ಲಿಅವಕಾಶವಿದ್ದು,ಯಾರೂ ಪ್ರತ್ಯೇಕರಲ್ಲ ಎಂದರು. ಮಾಜಿ ಶಾಸಕ ರುಕ್ಮಯ ಪೂಜಾರಿ, ತಾ.ಪಂ. ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ,ರಾಮದಾಸ್ ಬಂಟ್ವಾಳ,ತೇಜೋಮಯ ಮಂಗಳೂರು ಶುಭ ಹಾರೈಸಿದರು. ಇದೇ ವೇಳೆ ಮಾಜಿ ಶಾಸಕ ರುಕ್ಮಯ ಪೂಜಾರಿ ಅವರ ಗೌರವಾಧ್ಯಕ್ಷತೆ,ತಾಪಂ.ಸದಸ್ಯ ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.
ಪುರಸಭಾ ಸದಸ್ಯ ಬಿ.ಮೋಹನ್ ಸಂಚಾಲಕರು,ಪುರುಷೋತ್ತಮ ಸಾಲಿಯಾನ್ ಶಂಭೂರು ಪ್ರಧಾನ ಕಾರ್ಯದರ್ಶಿ,ಸಂತೋಷ ಕೋಟ್ಯಾನ್ ಜತೆ ಕಾರ್ಯದರ್ಶಿ,ರಾಜೇಶ್ ಬಾಳೆಕಲ್ಲು ಕೋಶಾಧಿಕಾರಿಯನ್ನಾಗಿ ಆಯ್ಕೆಗೊಳಿಸಲಾಯಿತು.ಹಾಗೂ ಉಪಾಧ್ಯಕ್ಷರು,ಸಂಘಟನಾ ಕಾರ್ಯದರ್ಶಿ,ಮತ್ತು ಕಾರ್ಯಕಾರಿ ಸದಸ್ಯರನ್ನೊಳಗೊಂಡಂತೆ ಸಮಿತಿ ರಚಿಸಲಾಯಿತು. ದೋಟ ಕ್ರಷ್ಣಪ್ಪ ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಲ್ಲಡ್ಕ ನಾರಾಯಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.ಪುರುಷೋತ್ತಮ ಸಾಲಿಯಾನ್ ವಂದಿಸಿದರು.
