ಗುರುಪುರ : ಇಲ್ಲಿನ ಕಾರಮೊಗರಿನಲ್ಲಿ ಕೆಲವು ಸಮಯದ ಹಿಂದೆ ನಿರ್ಮಾಣಗೊಂಡ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 14ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ 4 ಗಂಟೆಯಿಂದ ಮಧ್ಯರಾತ್ರಿವರೆಗೆ ನಿರಂತರ ವಿಭಿನ್ನ ತಂಡಗಳಿಂದ ಭಜನೆ, ಕೀರ್ತನೆ ಹಾಗೂ ವಿಶಿಷ್ಟ ಕೊಳಲುವಾದನ ಸಾದರಗೊಳ್ಳಲಿದೆ. ಜೊತೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಈ ಪೂಜಾ ಕೈಂಕರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಬೇಕಾಗಿ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ ರವಿರಾಜ ಶೆಟ್ಟಿ ಪ್ರಕಟನೆಯಲ್ಲಿ ತಿಲಿಸಿದ್ದಾರೆ.
