ವಾಮಂಜೂರು:ಮಾಧ್ಯಮದಿಂದ ಇಂದಿನ ಮಕ್ಕಳಿಗೆ ಟಿವಿ ಮತ್ತು ಮೊಬೈಲ್‍ಗಳ ವ್ಯಾಮೋಹ ಜಾಸ್ತಿಯಾಗಿದ್ದು ಆ ಮೂಲಕ ಹೆತ್ತವರು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಹಿಂದೆ ಸಮಾಜದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದರು,ಆದರೆ ಈಗ ವಿದ್ಯಾರ್ಥಿಗಳು ಕ್ರಿಕೆಟ್,ಚಲನಚಿತ್ರ,ಮೊದಲಾದವುಗಳನ್ನು ನೋಡಿ ಅಲ್ಲಿನ ಹಿರೋಗಳ ಅನುಕರಣೆ ಮಾಡುತ್ತಿದ್ದಾರೆ. ಹಿಂದೆ ಹಿರಿಯರು ಒಟ್ಟಾಗಿ ಕೂತು ಕಷ್ಟ ನಷ್ಟಗಳ ಬಗ್ಗೆ ಹೇಳಿ ಕೇಳಿ ಪರಿಹರಿಸುತ್ತಿದ್ದರು.ಇಂದು ಸಮಾಜಮಾಧ್ಯಮಗಳಿಂಧ ಕುಟುಂಬ ಕಲಹ,ಮಕ್ಕಳ ಭವಿಷ್ಯ ಮಂಕಾಗುತ್ತಿದೆ ಎಂದು ಚಿಂತಕ ವಿಕ್ಟರ್ ಲೋಬೊ ಅಭಿಮತ ಪಟ್ಟಿದ್ದಾರೆ.

SONY DSC

SONY DSCವಾಮಂಜೂರಿನ ಸೈಂಟ್ ರೇಮಂಡ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ ರಕ್ಷಕ ಸಂಘಧ ಸಭೆಯಲ್ಲಿ ಶಿಖರೋಪನ್ಯಾಸ ಮಾಡಿದರು.ಭಗಿನಿ ಮಾರಿಯೋಲಾ ಬಿ.ಎಸ್ ಮಾತನಾಡಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ನೀಡುತ್ತಿದೆ.ಕಳೆದ ವರ್ಷ ಶೇ 96,ಈ ಬಾರಿ 100 ಫಲಿತಾಂಶ ದಾಖಲಿಸಿದೆ ಎಂದರು.ಕಾಲೇಜಿನ ಪ್ರಾಂಶುಪಾಲೆ ಸಾಧನಾ ಬಿ.ಎಸ್ ಮಾತನಾಡಿ ಕಾಲೇಜಿನ ಅಭಿವೃದ್ಧಿಗಾಗಿ ಸರ್ವರ ಸಹಕಾರ ಬೇಕು ಎಂದರು.ಸಭೆಯಲ್ಲಿ 25 ಮಂದಿ ಸದಸ್ಯರನ್ನು ಶಿಕ್ಷಕ ರಕ್ಷಕ ಸಂಘಕ್ಕೆ ಆಯಕೆ ಮಾಡಲಾಯಿತು.ಸಭೆಯಲ್ಲಿ ಕಾರ್ಯಚಟುವಟಿಕೆಗಳ ವರದಿಯನ್ನು ಸವಿತಾ ಮಿನೇಜಸ್,ಲೆಕ್ಕಪತ್ರ ಅವಿಲ್ ರೆನಿಲ್ ಡಿಸಿಲ್ವಾ ಮಂಡಿಸಿದರು.ಸಭೆಯಲ್ಲಿ ಕಾರ್ಯಕ್ರಮವನ್ನು ವಸಂತ ಸಿ.ಎಚ್ ಮಾಡಿದರು.ದಿನಕರ ಅಂಚನ್ ವಂದಿಸಿದರು.

 

By Suddi9

Leave a Reply

Your email address will not be published. Required fields are marked *