ಎಡಪದವು: ಪಾಡ್ಯಾರ್ ಫ್ರೆಂಡ್ಸ್ ಇದರ ವತಿಯಿಂದ ಮಾ.19ರಂದು ಶನಿವಾರ ಸಾಯಾಂಕಾಲ ಪಾಡ್ಯಾರು ಮಜಲು ಗದ್ದೆಯಲ್ಲಿ 5 ರಿಂದ 6.30ರವರೆಗೆ ಶ್ರೀ ರತೀಶ್ ಭಟ್ ಪಲ್ಕೆ ಇವರ ನೇತ್ರತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು.


ಹೋಟೇಲ್ ಸ್ವಾಗತ್ ಕೈಕಂಬ ಇದರ ಮಾಲಕ ಜಗದೀಶ್ ಬಂಗೇರಾ ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪಾಡ್ಯಾರ್ ಫ್ರೆಂಡ್ಸ್ ಅಧ್ಯಕ್ಷರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.






