ಮೂಲ್ಕಿ:ಸ್ವಾತಂತ್ರ್ಯ ಹೋರಾಟಗಾರ ದಿ.ಮೂಲ್ಕಿ ರಾಮಕೃಷ್ಣ ಪೂಂಜರವರ ಸೊಸೆ, ಸಮಾಜ ಸೇವಕ ದಿ.ಹರಿ ಪೂಂಜಾ ರವರ ಧರ್ಮಪತ್ನಿ ಮೂಲ್ಕಿ ಕಾರ್ನಾಡು ವಿಲ್ಲಾ ನಿವಾಸಿ ಪದ್ಮಾವತಿ ಹರಿ ಪೂಂಜಾ(86) ರವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ರಾಮಕೃಷ್ಣ ಪೂಂಜಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿಯಾಗಿ ಉತ್ತಮ ಸಂಘಟಕಿಯಾಗಿ ಸಮಾಜದ ವಿವಿಧ ಕ್ಷೇತ್ರದ ಸೇವೆ ಸಲ್ಲಿಸಿರುತ್ತಾರೆ. ಅವರು 2ಹೆಣ್ಣು ಮತ್ತು 1ಗಂಡು ಮಗನನ್ನು ಅಗಲಿದ್ದಾರೆ.
