ಸುದ್ದಿ9ಬಂಟ್ವಾಳ; ಬಿ.ಸಿ.ರೋಡಿನಲ್ಲಿ ಕಾಯರ್ಾಚರಿಸುತ್ತಿರುವ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ದಯಾನಂದ ಶೆಟ್ಟಿ ಎಂಬವರು ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಬಿ.ಸಿ.ರೋಡ್ ಬಸ್ ನಿಲ್ಧಾಣದಲ್ಲಿ ಕಾರ್ಯ ನಿರ್ವಹಿಸುವ ಬಸ್ ಏಜಂಟರು ಜಿಲ್ಲಾ ಎಸ್.ಪಿ ಯವರಿಗೆ ದೂರು ಸಲ್ಲಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈತ ಬಿ.ಸಿ.ರೋಡ್ ಬಸ್ ನಿಲ್ಧಾಣದ ಟೆಂಡರನ್ನು ಪುರಸಭೆಯಿಂದ ವಹಿಸಿ ಬಸ್ಸು ಮಾಲಕರಿಂದ ಬಸ್ ನಿಲ್ಧಾಣದ ಶುಲ್ಕವನ್ನು ಏಕಾಏಕಿಯಾಗಿ ಐದು ರಪಾಯಿಯಿಂದ ಎಂಟು ರೂಪಾಯಿಗೆ ಏರಿಕೆ ಮಾಡಿದ್ದಾನೆ.
ಪ್ರಸ್ತುತ ಪುರಸಭೆ ಬಸ್ ನಿಲ್ಧಾಣದ ಶುಲ್ಕ ಏರಿಕೆಯ ಬಗ್ಗೆ ಯಾವುದೇ ಪ್ರಕಟನೆ ಹೊರಡಿಸಿಲ.್ಲ ಅಲ್ಲದೆ ಏಲಂ ಕೂಡ ಮಾಡದಿದ್ದರೂ ಇಲ್ಲಿನ ಕೆಲ ಅಧಿಕಾರಿಗಳೊಂದಿಗೆ ಈತ ಒಳ ಒಪ್ಪಂದ ಮಾಡಿಕೊಂಡು ಇದೀಗ ಎಂಟರಿಂದ ಹದಿನೈದು ರೂ ಹೆಚ್ಚುವರಿ ನೀಡಬೇಕೆಂದು ವಸೂಲಿಗೆ ಇಳಿದಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಬಸ್ ನಿಲ್ಧಾಣದಲ್ಲಿ ಆಗುವ ಕೆಲವೊಂದು ಘಟನೆಗಳಿಗೂ ಬಸ್ ಏಜಂಟರನ್ನೇ ಗುರಿಯನ್ನಾಗಿಸಿ ಮಾನವ ಹಕ್ಕು ಆಯೋಗದ ಲೆಟರ್ಹೆಡ್ನಲ್ಲಿ ದೂರುನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆಂದು ಬಸ್ ಏಜಂಟರ ಪರವಾಗಿ ಪದ್ಮನಾಭ ಎಂಬವರು ಎಸ್.ಪಿ ಯವರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಜನರಿಗೆ ಸೇವೆ ನೀಡುವ ನೆಪದಲ್ಲಿ ಈತ ಹಲವರಿಗೆ ವಂಚಿಸುತ್ತಿದ್ದು, ಈತನಿಂದ ವಂಚನೆಗೊಳಗಾದವರು ಬೆದರಿಕೆಗೆ ಹಿಂಜರಿದು ದೂರು ನೀಡಲು ಮುಂದಾಗುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಿರುವ ಪದ್ಮನಾಭರವರು,ಬಸ್ ಮಾಲಕರು,ಬಸ್ ತಂಗುದಾಣದಲ್ಲಿ ಮೂವರು ಮೊಬೈಲ್ ಪಿಟ್ಟರ್ ಗಳನ್ನು ನೇಮಿಸಿದ್ದು ಅವರಿಂದಲೂ ತಲಾ ನೂರು ರೂಪಾಯಿಯಂತೆ ವಸೂಲಿಗಿಳಿದಿದ್ದಾನೆ.ಕೊಡದಿದ್ದರೆ ಆಯೋಗದ ಹೆಸರಿನಲ್ಲಿ ಪೊಲೀಸರಿಗೆ ದೂರು ನೀಡುವ ಬೆದರಿಕೆ ಒಡ್ಡುತ್ತಿದ್ದಾನೆಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿ,ಬಂಟ್ವಾಳ ಪುರಸಭೆ,ಬಂಟ್ವಾಳ ಉಪ ವಿಭಾಗದ ಡಿ,ವೈ.ಎಸ್.ಪಿ,ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಬೆಂಗಳೂರು ಮಾನವ ಹಕ್ಕು ಆಯೋಗಕ್ಕೂ ಸಲ್ಲಿಸಡಿದ್ದಾರ

By suddi9

Leave a Reply

Your email address will not be published. Required fields are marked *