20180525_121822[1]

ಶ್ರೀನಿವಾಸಪುರ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಕ್ಕಳ ಕಳ್ಳರ ವದಂತಿ ಸಾರ್ವಜನಿಕರಲ್ಲಿ ಭೀತಿ ಹೆಚ್ಚಿದೆ. ಇದರಿಂದ  ಜನರಿಗೆ ನಿಜ ಯಾವುದು, ಸುಳ್ಳು ಯಾವುದು ಎನ್ನುವ ತಿಳುವಳಿಕೆ ಮತ್ತು ಜ್ಞಾನ ಇಲ್ಲ ಎಂದು ಸಿಪಿಐ ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯಗಳನ್ನು ಅಪಲೋಡ್ ಮಾಡಿರುವ ಪ್ರಕರಣಕ್ಕೆ ಸೈಬರ್ ಕ್ರೈಂ ಕೊಪ್ಪಳದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಹಲವು ಕಡೆಗಳಲ್ಲಿ ಹಲ್ಲೆ ಪ್ರಕರಣಗಳು  ದಾಖಲಾಗಿದ್ದು, ಅದರಲ್ಲಿ ಕೊಲೆ ಪ್ರಕರಣವೂ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಡೆಂಟ್ ರತ್ನಕುಮಾರಿ ಮಾತನಾಡಿ, ಜಿಲ್ಲೆಯಾದ್ಯಂತ ಭಿಕ್ಷುಕರ ಮೇಲೆ ಮತ್ತು ರಸ್ತೆ ಬದಿ ಮಲಗುವವರ ಮೇಲೆ ಹಲ್ಲೆಗಳಾಗುತ್ತಿದ್ದು, ಇದರಿಂದ ತೊಂದರೆಯಾಗಬಾರದೆಂದು ಅಂತಹವರನ್ನು ಗುರುತಿಸಿ ಅವರನ್ನು ಬಂಗಾರಪೇಟೆಯ ಸಮಾಜ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಿ.ಆರ್.ಜಗದೀಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *