ಹೈದರಾಬಾದ್: ಸಿಕಂದರಾಬಾದ್ ನ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಗಳು ಹೇಳಿವೆ.
21ರ ಹರೆಯದ ಬಂಡಾರು ವೈಷ್ಣವ್ ತನ್ನ ಮನೆಯಲ್ಲಿ ನಿನ್ನೆ ತಡರಾತ್ರಿ ಊಟ ಮಾಡುತ್ತಿದ್ದ ವೇಳೆ ಎದೆನೋವಿಗೆ ಒಳಗಾಗಿ ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಸುಮಾರು 1.30ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸ್ವತಃ ಹೃದಯ ಕಾಯಿಲೆಯಿಂದ ಬಳಲುತ್ತಿರುವ ದತ್ತಾತ್ರೇಯ ಅವರಿಗೆ ಮಗನ ಸಾವಿನ ಸುದ್ದಿಯನ್ನು ಮುಂಜಾನೆ ಮೂರು ಗಂಟೆ ವೇಳೆ ತಿಳಿಸಲಾಯಿತು ಎಂದು ತಿಳಿದುಬಂದಿದೆ.
ವೈಷ್ಣವ್ ಅವರು ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು.

