ಸುದ್ದಿ9ಮಂಗಳೂರು :ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು -ಕುವೈಟ್ ನಡುವೆ ವಿಮಾನ ಆರಂಭಿಸಬೇಕು ಎಂದು ಒತ್ತಾಯಿಸಿ ಕೇಂದ್ರ ವಿಮಾನ ಯಾನ ಸಚಿವರು ಹಾಗೂ ರಾಜ್ಯ ಸಚಿವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವಾಲಯ ಮಂಗಳೂರು -ಕುವೈಟ್ಗೆ ವಾರಕ್ಕೆ ಮೂರು ಬಾರಿ ವಿಮಾನ ಯಾನ ಮರು ಆರಂಭಿಸಿದೆ. ಅಕ್ಟೋಬರ್ 27ರಿಂದ ಈ ಸೇವೆ ಮರು ಆರಂಭವಾಗಲಿದೆ.
ಮಂಗಳೂರು-ಬೆಹರೈನ್-ಕುವೈಟ್-ಮಂಗಳೂರು ಹಾದಿಯಲ್ಲಿ ಸಾಗುವ ಈ ವಿಮಾನಗಳು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಬೆಳಗ್ಗೆ 7.30ಕ್ಕೆ ಹೊರಟು ಬೆಹರಿನ್ ಮೂಲಕ ಬೆಳಗ್ಗೆ 11.15ಕ್ಕೆ ಕುವೈಟ್ ತಲುಪಲಿವೆ. ಕುವೈಟ್ನಿಂದ ಮಧ್ಯಾಹ್ನ 12.15ಕ್ಕೆ ಹೊರಡುವ ವಿಮಾನವು ನಿಲುಗಡೆರಹಿತವಾಗಿ ಸಂಜೆ 7.25ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಏರ್ ಇಂಡಿಯಾ ಚಾರ್ಟರ್ಸ್ ನ ಮುಖ್ಯ ಕಾರ್ಯನಿರ್ವಹಣಾಕಾರಿ ಕೆ.ಶಾಮ್ಸುಂದರ್ ತಿಳಿಸಿದ್ದಾರೆ.

Tarom.b737-700.yr-bgg.arp

By Suddi9

Leave a Reply

Your email address will not be published. Required fields are marked *