ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಚಚರ್್ ನಿವಾಸಿ ಗೃಹಿಣಿ ಪುಷ್ಪಲತಾ(34) ಅವರ ನಿಗೂಢ ಕೊಲೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದ್ದು, ಆಕೆ ಪತಿ ಹಿರೇಂಬಾಡಿ ಶಾಲೆಯ ಮುಖ್ಯ ಶಿಕ್ಷಕ ಗುರುಮೂತರ್ಿಯವರ ಮಂಪರು ಪರೀಕ್ಷೆ ಉತ್ತರ ನೀಡಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಗುರುಮೂತರ್ಿಯನ್ನು ಈಗಾಗಲೇ ನಾಲ್ಕೈದು ಬಾರಿ ಮಂಪರುಪರೀಕಷೆಗೊಳಪಡಿಸಿದ ಪೊಲೀಸರು ಕೊಲೆಗೆ ಸಾಕ್ಷವಾಗಬೇಕಾದ ಯಾವುದೇ ಮಹತ್ತರ ಅಂಶ ಸಿಕ್ಕಿಲ್ಲ ಎಂದು ಪೊಲೀಸರು ಪ್ರಾಥಮಿಕ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಈಗಾಗಲೇ ಈ ವರದಿಯನ್ನು ಅಪರಾಧ ವಿಧಿವಿಜ್ಞಾನದ ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಪ್ರಕರಣದ ಬಗೆಗಿನ ಸತ್ಯಾಸತ್ಯತೆ ಬಯಲಾಗಲಿದೆ.
