ಅಡ್ಡೂರು: ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಗಲಿಸಲಾಗದೇ ತನ್ನ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಹಿನ್ನೆ ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ರಾತ್ರಿ ಇಲ್ಲಿನ ಕಳಸಗುರಿ-ನೂಯಿಯಲ್ಲಿ ಪಟಾಕಿಸಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸೌರಾಝ್ ಇಮ್ರಾನ್, ಇಮ್ರಾನ್ ಅಡ್ಡೂರು, ರಿಝ್ವಾನ್, ನಝೀರ್, ಇಮ್ತಿಯಾಝ್, ಮರ್ವಾನ್ ಹಾಗೂ ಇರ್ಷಾದ್ ಮತ್ತಿತರರಿದ್ದರು.


