ಬಳ್ಳಾರಿ: ಇಷ್ಟು ದಿನ ಅಹಂಕಾರದಿಂದ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಸೋಲಿನ ಹತಾಶೆಯಿಂದ ಈಗ ರಾಗ ಬದಲಾಯಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಸಮೀಕ್ಷ ಫಲಿತಾಂಶ ಬಳಿಕ ಸಿಎಂ ನಾಟಕ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಲ್ಲೂ ಸೋಲುತ್ತಾರೆ. ಆಗ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ. ಆಗ ಕೇವಲ ಸಲಹೆ ನೀಡಲು ಮಾತ್ರ ಉಪಯೋಗಕ್ಕೆ ಬರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಎಂದು ಹೇಳಿವೆ. ಆದರೆ ಎಲ್ಲ ಸಮೀಕ್ಷೆ ಮೀರಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ಅನೇಕ ರಾಜ್ಯದ ಚುನಾವಣಾ ಸಮೀಕ್ಷೆ ನೋಡಿದ್ದೇನೆ. ಒಂದೊಂದು ಸಂಸ್ಥೆ ಒಂದೊಂದು ಹೇಳುತ್ತದೆ. ಗ್ರೌಂಡ್ ರಿಯಾಲಿಟಿ ನಮಗೆ ಗೊತ್ತಿದೆ ಎಂದರು.
ಬಿಜೆಪಿ ಬಹುಮತದಿಂದ 120 ಕ್ಕೂ ಹೆಚ್ಚು ಸ್ಥಾನದಿಂದ ಗೆಲ್ಲಲಿದೆ. ಕಡಿಮೆಯಾಗೋಕೆ ಸಾಧ್ಯವೇ ಇಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ನಮಗೆ 7 ಬರುತ್ತೇ ಅಂತಾ ಸಮೀಕ್ಷೆಗಳು ಹೇಳಿವೆ. ಅದು ಅಸಾಧ್ಯ. ಬಳ್ಳಾರಿಯಲ್ಲೇ 8 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

