pic

ಮಂಗಳೂರು: ನಟ ಪ್ರಕಾಶ್ ರೈ ಕೇವಲ ಪ್ರಚಾರಕ್ಕೆ ಬೇಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಾನೆ. ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ ಎಂದು ಹುಚ್ಚ ವೆಂಕಟ್ ನಟ ಪ್ರಕಾಶ ರೈ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕಾಶ್ ರೈ ಮಾತ್ರನಾ..? ನಾಯಿನು ಕೂಡ ಡೈಲಾಗ್ ಹೊಡೆಯುತ್ತೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ರೈಗಿಲ್ಲ. ಮೋದಿ ಅವರು ಜನತೆಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ನೀನು ಏನು ಮಾಡಿದ್ದಿ..? ಎಷ್ಟು ಜನರಿಗೆ ಊಟ ಹಾಕಿದ್ದಿ..? ಎಂದು ಪ್ರಶ್ನಿಸಿದ್ದಾರೆ.

ನಾನು ಆರ್.ಆರ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಗಂಡು ಮಕ್ಕಳ ಚಪ್ಪಲಿ ಚಿಹ್ನೆ ನನ್ನ ಗುರುತು. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಮಾತ್ರವಲ್ಲ ಮುಂದೆ ನಾನೇ ಪ್ರಧಾನಿಯಾಗುವುದು ಎಂದು ಹೇಳಿದ್ದಾರೆ.

 

By Suddi9

Leave a Reply

Your email address will not be published. Required fields are marked *