IMG-20180428-WA0004

ಅಥಣಿತಾಲೂಕಿನ  ಬೇವನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಅಮೋಗ ಸಿದ್ದೇಶ್ವರ ಜಾತ್ರಾ ಮಹೋತ್ಸವ ಇದಿನಿಂದ (ಎ.29) ಮೇ 5ರವರೆಗೆ ಸತತ ಮೂರು ದಿನಗಳ ಕಾಲ ಜಾತ್ರೆಯು ಜರಗಲಿದೆ.

ರವಿವಾರದಂದು ಅಥಣಿ, ಪಾಂಡೇಗಾಂವ, ತೇವರೇಟ್ಟಿ, ಹಣಮಾಪೂರ, ಮರಬು, 5 ಊರುಗಳಿಂದ ದೇವರಗಳ ಪಲ್ಲಕ್ಕಿಗಳು ಆಗಮಸಲಿದ್ದು, ಸಂಜೆ 4ಕ್ಕೆ ದೇವರ ಭೇಟಿ ಕೋಡುವ ಕಾರ್ಯಕ್ರಮವು ನೆರವೇರಲಿದೆ. ಬಳಿಕ ರಾತ್ರಿ 9ಕ್ಕೆ ಡೋಳ್ಳನ ಪದಗಳ ಸಾಂಸ್ಕೃತಿಕ ಕಾರ್ಯಕ್ರಮವು ಆಯೋಜಿಸಲಾಗಿದೆ.

ಎ.30ರಂದು ದೇವರಿಗೆ ವಿಶೇಷ ಪೂಜೆ ದೇವರಿಗೆ ನೈವಿದ್ಯ (ಬಾನ) ಇರುವದು, ಮಂಜಾನೆಯಿಂದ ಸಂಜೆಯವರಿಗೆ ಡೋಳ್ಳನ ಪದಗಳಕಾರ್ಯಕ್ರಮ ಜರಗಲಿದ್ದು,  ರಾತ್ರಿ 9ಕ್ಕೆ ರೇಣುಕಾ ಮಹಾತ್ಮೆ ನಾಟಕ ಹಮ್ಮಿಕೊಳ್ಳಲಾಗಿದೆ.

ಎ.1ರಂದು ದೇವರ ಗುಡಿಯಿಂದ ಪಲ್ಲಕ್ಕಿಗಳು ಡೋಳ್ಳು ಕುಣಿತ ವಾದ್ಯದೊಂದಿಗೆ ಗದ್ದುಗೆಯ ಮನೆಗೆ ತೆರಳಲಿದೆ. ಸಂಜೆ 4ಕ್ಕೆ ಜಂಗಿ ಕುಸ್ತಿಯ ಕಾರ್ಯಕ್ರಮ ನಡೆಯಲಿದ್ದು, ಜಾತ್ರೆಗೆ ಹೇಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಆರ್ಶೀವಾದ ಪಡೆದುಕೊಳ್ಳಬೇಕು ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *