pio

ಪಿರಿಯಾಪಟ್ಟಣ: ನಂದೀಪುರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ.

ನಂದೀಪುರ ಗ್ರಾಮದ ಮಲ್ಲೇಶ್ (34) ಮೃತ ರೈತ.

ಈತನಿಗೆ ತನ್ನ ಅಣ್ಣ ಸಿದ್ದೇಗೌಡನ ಜಂಟಿ ಖಾತೆಯಲ್ಲಿ 2.11 ಎಕರೆಯಷ್ಟು ಜಮೀನಿದ್ದು ಪಿರಿಯಾಪಟ್ಟಣದ ಎಡಿಬಿ ಅಬ್ಬೂರು ಬ್ಯಾಂಕ್‌ನಲ್ಲಿ 90 ಸಾವಿರ ರು.ಸಾಲವಿದ್ದು 2ಲಕ್ಷದಷ್ಟು ಕೈಸಾಲ ಮಾಡಿಕೊಂಡಿದ್ದ. ರಾಗಿ ಜೋಳ, ತಂಬಾಕು ಬೆಳೆದಿದ್ದು ಇದರಿಂದ ಮನನೊಂದಿದ್ದ ಈತ ಸಾಲ ತೀರಿಸಲಾಗದೆ ಮನೆಯಲ್ಲಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಮಾಡಿಕೊಂಡಿರುವುದಾಗಿ ಮೃತನ ಸಹೋದರ ಸಿದ್ದೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ನಿ ಭಾಗ್ಯ, ಹರ್ಷಿತ ಮತ್ತು ಅಮೃತ ಎಂಬ ಹೆಣ್ಣುಮಕ್ಕಳಿದ್ದಾರೆ. ಅತ್ಮಹತೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *