9af801d48f5dfb689cd33242d16def7d-300x172

ಭದ್ರಾವತಿ:  ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲಿ ಮೃತಪಟ್ಟು, ನಾಲ್ವರಿಗೆ ತೀವ್ರಕರವಾದ ಗಾಯಗಳಾದ ಘಟನೆ ನಗರದ ನ್ಯೂಕಾಲೊನಿ ಕೂಲಿಬ್ಲಾಕ್ ಶೆಡ್ ಏರಿಯಾದ ಮಂಗಳವಾರ ನಡೆದಿದೆ.

ಮೃತರನ್ನು ಸರಸ್ವತಿ ಎಂದು ಗುರುತಿಸಲಾಗಿದೆ.

ಗ್ಯಾಸ್ ಸಿಲಿಂಡರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಮನೆಯಲ್ಲಿದ್ದ ನೀಲಮ್ಮ ಅವರು ಸಿಲಿಂಡರ್‌ನ್ನು ಹೊರಭಾಗಕ್ಕೆ ತಂದಿದ್ದಾರೆ. ಈ ವೇಳೆ ಗಾಳಿಯ ರಬಸಕ್ಕೆ ಜ್ವಾಲೆ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸರಸ್ವತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ಸ್ಥಳೀಯ ನಿವಾಸಿಗಳಾದ ಕಲಾವತಿ, ಸಿದ್ದಮ್ಮ, ಮೊಹಮ್ಮದ್ ಹುಸೈನ್ ಹಾಗೂ ನೀಲಮ್ಮ ಅವರಿಗೆ ತೀವ್ರಕರವಾದ ಗಾಯಗಳಾಗಿದ್ದು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಲಿಂಡರ್ ಸ್ಫೋಟಗೊಂಡ ಹಿನ್ನಲೆಯಲ್ಲಿ ಸುಮಾರು ಮೀಟರ್ ದೂರದಲ್ಲಿರುವ ಮಾರಿಯಮ್ಮ ದೇವಾಲಯದ ಕಿಟಕಿ ಸರಳಿಗೆ ತಗುಲಿ ಸರಳು ಸಡಿಲಗೊಂಡಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಕಾರ್ಯಪ್ರವೃತ್ತರಾಗಿದ್ದಾರೆ.

By suddi9

Leave a Reply

Your email address will not be published. Required fields are marked *