ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ರಂಗಾಯಣ ರಘು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪಧರ್ಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸುಳಿದಾಡುತ್ತಿದೆ.raghu1
ಹಾಸ್ಯ ಪಾತ್ರ, ಖಳನಾಯಕ ಪಾತ್ರ ಹಾಗೂ ಇತರ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಘು ಬಿಜೆಪಿ ಟಿಕೆಟ್ನಲ್ಲಿ ತುಮಕೂರಿನಿಂದ ಸ್ಪಧರ್ಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ನೂರಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅನುಭವವಿರುವ ರಘುಗೆ ರಾಜಕೀಯ ತೀರಾ ಹೊಸದು ಆದರೆ ಕನ್ನಡದ ಹಲವು ಚಿತ್ರನಟರು ಈಗಾಗಲೇ ಚುನಾವಣಾ ಅಖಾಡಕ್ಕೆ ಇಳಿದಿರುವಿದರಿಂದ ತಾನೂ ಕೂಡಾ ಒಂದು ಕೈ ನೋಡುವುದಾಗಿ ರಘು ನಿರ್ಧರಿಸಿರಬೇಕು. ಈ ಬಗ್ಗೆ ರಂಗಾಯಣ ರಘು ತಮ್ಮ ಸ್ಪಷ್ಟ ನಿಲುವನ್ನು ಇದುವರೆಗೂ ತಿಳಿಸಿಲ್ಲ ಹಾಗಾಗಿ ಇದರ ಕುರಿತು ಯಾವುದನ್ನೂ ನಿಖರವಾಗಿ ಹೇಳುವಂತಿಲ್ಲ ಎಂದು ಮೂಲಗಳು ತಿಳಿಸಿವೆ

By suddi9

Leave a Reply

Your email address will not be published. Required fields are marked *