ಮುಂಬೈ: ಕರಣ್ ಜೊಹರ್ ನಿಮರ್ಾಣದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷೆಯ ಚಿತ್ರ ‘ಶುದ್ಧಿ’ಯಿಂದ ನಟ ಹೃತಿಕ್ ರೋಶನ್ ಹೊರ ನಡೆದಿದ್ದಾನೆ. ಈತ ಈ ರೀತಿ ಮಾಡಲು ಯಾವುದೇ ಭಿನ್ನಾಭಿಪ್ರಾಯವಾಗಲೀ ಅಥವಾ ಮೈಮನಸ್ಸಾಗಲೀ ಕಾರಣವಲ್ಲ ಎಂದು ತಿಳಿದುಬಂದಿದೆ. ಬದಲಿಗೆ ಹೃತಿಕ್ನ ಆರೋಗ್ಯ ಸಮಸ್ಯೆ ಹಾಗೂ ಪತ್ನಿ ಸುಸೇನ್ಳಿಂದ ವಿಚ್ಛೇಧನ ಮುಂತಾದ ವೈಯಕ್ತಿಕ ಕಾರಣಗಳಿಂದಾಗಿ ಹೃತಿಕ್ ಈ ಸಿನಿಮಾದಿಂದ ಹೊರಬಂದಿರುವುದಾಗಿ ಮೂಲಗಳು ತಿಳಿಸಿವೆ.
ಹೃತಿಕ್ ಅಭಿನಯದ ಅಗ್ನಿಪತ್ ಚಿತ್ರವನ್ನು ನಿದರ್ೇಶಿಸಿರುವ ಕರಣ್ ಮಲ್ಹೋತ್ರಾ ಶುದ್ದಿ ಸಿನಿಮಾವನ್ನು ನಿದರ್ೇಶಿಸುತ್ತಿದ್ದಾರೆ, ಮತ್ತೊಂದೆಡೆ ಈ ಚಿತ್ರದಲ್ಲಿ ಕರೀನಾ ಕಪೂರ್ ಹೃತಿಕ್ಗೆ ಜೋಡಿಯಾಗಿದ್ದರು. ಆದರೆ ಸದ್ಯ ಹೃತಿಕ್ ತನ್ನಿಂದ ಸಿನಿಮಾದ ಚಿತ್ರೀಕರಣ ವಿಳಂಬವಾಗುವುತ್ತಿರುವುದನ್ನು ಮನಗಂಡು ಖುದ್ದಾಗಿ ಚಿತ್ರದಲ್ಲಿ ನಟಿಸದಿರುವ ನಿಧರ್ಾರ ಕೈಗೊಂಡಿದ್ದಾರೆ. ಈ ಚಿತ್ರ ನಿಜವಾಗಿಯೂ ಉತ್ತಮ ಕತೆಯನ್ನು ಹೊಂದಿದ್ದು ಭವಿಷ್ಯದಲ್ಲಿ ಕರಣ್ ಮಲ್ಹೋತ್ರಾ ಜೊತೆ ಇನ್ನೊಂದು ಸಿನಿಮಾದಲ್ಲಿ ಕೆಲಸ ಮಾಡುವುದಾಗಿ ಹೃತಿಕ್ ತಿಳಿಸಿದ್ದಾರೆ.
ಡೇಟ್ಸ್ ಸಮಸ್ಯೆಯಿಂದಾಗಿ ಕರೀನಾ ಕೂಡಾ ಶುದ್ಧಿ ಚಿತ್ರದಿಂದ ಹೊರಬಂದಿರುವ ಬಗ್ಗೆ ಬಾಲಿವುಡ್ನಲ್ಲಿ ಸುದ್ದಿ ಹರಿದಾಡುತ್ತಿದ್ದು, ಇವರಿಬ್ಬರ ಸ್ಥಾನಕ್ಕೆ ರಾಮ್ಲೀಲಾ ಜೋಡಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಎಂಟ್ರಿ ಪಡೆಯುವ ಸಾಧ್ಯತೆಯಿದೆ ಎಂದು ಬಿಟೌನ್ ಮೂಲಗಳು ತಿಳಿಸಿವೆ

