ಕೈಕಂಬ : ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆ ಚಾವಡಿಯ ಧೂಮಾವತಿ, ಬಂಟ ಸಹಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ, ಗೃಹ ಪ್ರವೇಶ ಮತ್ತು ಧರ್ಮನೇಮೋತ್ಸವ ಎಪ್ರಿಲ್ 27ರಿಂದ 29ರವರೆಗೆ ನಡೆಯಲಿದೆ.
ಏತಮೊಗರುವಿನಲ್ಲಿ ಎ. 9ರಂದು ಏತಮೊಗರುವಿನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಪ್ಪುಗುಡ್ಡೆ ಭುಜಂಗ ಶೆಟ್ಟಿ ಚಾವಡಿ ಮಾಹಿತಿಯೊಂದಿಗೆ ಚಾವಡಿ ಮನೆಯ ಇತಿಹಾಸ ಹಾಗೂ ಧರ್ಮನೇಮೋತ್ಸವದ ಮಹತ್ವ ತಿಳಿಸಿದರು.

ಬೈಲು ಮೂಡುಕರೆ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು(ಜಂಪರ್) ಶ್ರೀಧರ ಆಳ್ವ ಮಾತನಾಡುತ್ತ, ಇಲ್ಲಿನ ದೈವಗಳ ಕಾರಣಿಕದಿಂದಲೇ ತಾನು ಮೂಲಮನೆಯ ಆರಾಧನೆಗೆ ಮರಳುವಂತಾಗಿತು ಎಂದರು.

ಗೋಷ್ಠಿಯಲ್ಲಿ ಬೈಲು ಮೂಡುಕರೆ ಕುಟುಂಬದ ಮುಖ್ಯಸ್ಥ ಹಾಗೂ ಈ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷ ಮಂಜುನಾಥ ಭಂಡಾರಿ ಮೂಡುಶೆಡ್ಡೆ), ಜಯ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ(ಗಡಿಕಾರ, ಬೈಲು ಏತಮೊಗರುಗುತ್ತು), ಬೈಲು ಏತಮೊಗರು ದೊಡ್ಡಮನೆಯ ಯಜಮಾನ ಹರೀಶ ಶೆಟ್ಟಿ, ರಾಜೀವ ಆಳ್ವ, ಬಾಬು ಶೆಟ್ಟಿ ಹಾಗೂ ರಮಾನಾಥ ಅತ್ತರ್(ಚಿತ್ತಣ್ಣ) ಮೊದಲಾದವರು ಇದ್ದರು. ಸತೀಶ್ ಶೆಟ್ಟಿ ಕಂದಾವರ ನಿರೂಪಿಸಿದರು.
ಕಾರ್ಯಕ್ರಮ ವಿವರ :
ಎ.27 ಪೊಳಲಿ ಕೋಡಿಮಜಲು ವೇದಮೂರ್ತಿ ಅನಂತ ಪದ್ಮನಾಭ ಉಪಾಧ್ಯಯ, ಜ್ಯೋತಿಷ್ಯ ವಿದ್ವಾನ್ ನೇತೃತ್ವ ಹಾಗೂ ಅದ್ಯಪಾಡಿ ವೇದಮೂರ್ತಿ ಉಮೇಶ್ ಉಡುಪರ ಉಪಸ್ಥಿತಿಯಲ್ಲಿ ಪರಿಗೃಹ, ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಎ. 28ರಂದು ಗಣಹೋಮ, ನವಗ್ರಹ ಹೋಮ ಸತ್ಯನಾರಾಳ ಭಂಡಾರ ಆಗಮನ, ಎ. 29ರಂದು ನಾಗತಂಬಿಲ, ಭಂಡಾರ ಶುದ್ದಿ, ಧೂಮಾವತಿ, ಬಂಟ ದೈವಗಳ ದರ್ಶನ, ಪಲ್ಲಪೂಜೆ ಹಾಗೂ ಮಹಾ ಅನ್ನಸಂತರ್ಪಣೆ. ರಾತ್ರಿ 7ರಿಂದ ಧರ್ಮನೇಮೋತ್ಸವ ಆರಂಭವಾಗಲಿದೆ. ರಾತ್ರಿ 9.30ಕ್ಕೆ ಪ್ರಧಾನ ದೈವ ಧೂಮಾವತಿ, ಬಂಟ ಧರ್ಮನೇಮೋತ್ಸವ ಮತ್ತು ಕೊಡಮಣಿತ್ತಾಯ, ಪಂಜುರ್ಲಿ ದೈವಗಳ ಧರ್ಮನೇಮೋತ್ಸವ. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಯಕ್ಷದೇವಾ ಮಿತ್ರ ಯಣ ಪೂಜೆ, ಗೃಹ ಪ್ರವೇಶ, ಧೂಮಾವತಿ ಬಂಟ ದೈವ ಪ್ರತಿಷ್ಠೆ, ಕಲಶಾಭಿಷೇಕ, ಬೈಲು ಮಾಗಣೆ ಧೂಮಾವತಿ ಬಂಟ ಸಹಪರಿವಾರ ದೈವಗಕಲಾ ಮಂಡಳಿ ಬೆಳುವಾಯಿಯವರಿಂದ `ಧುರವೀಳ್ಯ’ ತಾಳಮದ್ದಲೆ ಸಾದರಗೊಳ್ಳಲಿದೆ. ಎ. 30ರಂದು ಬೆಳಿಗ್ಗೆ ದೈವಗಳ ಭಂಡಾರ ನಿರ್ಗಮನವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
