ಅಡ್ಡೂರು: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಬಾಲಕಿ ಗಾಯಗೊಂಡಿರುವುದಲ್ಲದೆ, ವಿದ್ಯತ್ ಸಲಕರಣೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ನಡುಗುಡ್ಡೆ ಸಮೀಪದ ಮನೆಯೊಂದರಲ್ಲಿ ರವಿವಾರ ಸಂಜೆ ನಡೆದಿದೆ.
ನಡುಗುಡ್ಡೆ ನಿವಾಸಿ ದಿ.ಉಮರಬ್ಬ ಹಾಗೂ ಮೈಮುನ ಅವರ ಪುತ್ರಿ ಫಾತಿಮಾ (18) ಎಂದು ಗುರುತಿಸಲಾಗಿದೆ.
ಫಾತಿಮಾ ಮನೆಯ ಕೊಠಡಿಯಲ್ಲಿ ಮಲಗಿದ್ದ ವೇಳೆ ಕೈಗೆ ಸಿಡಿಲು ಬಡಿದು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರಯೊಂದಕ್ಕೆ ದಾಖಲಿಸಲಾಗಿದೆ.
ಇನ್ನೂ ಘಟನೆಯಿಂದ ಮನೆಯ ವಿದ್ಯತ್ ಸಲಕರಣೆಗಳು ಸುಟ್ಟು ಭಸ್ಮವಾಗಿದ್ದು, ಇದರಿಂದ ಮನೆಯ ಕೆಲ ಭಾಗ ಬಿರುಕು ಬಿಟ್ಟಿದೆ. ಸುಮಾರು 1.50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


