040418_yakshagana

ಮಂಗಳೂರು: ರಾಹುಲ್ ಗಾಂಧಿ ಈ ಹಿಂದೆ ರಾಜ್ಯದಲ್ಲಿ ಜನಾಶೀರ್ವಾದದ ಪ್ರಚಾರದ ಸಮಾವೇಶದಲ್ಲಿ ಹೇಳಿಕೆ ನೀಡಿದ್ದ “ ಇವನರ್ವ, ಇವನರ್ವ” ಎನ್ನುವ  ಹೇಳಿಕೆಯನ್ನು ಗುರಿಯಾಗಿಸಿ  ಯಕ್ಷಗಾನದ ಹಾಸ್ಯ ಕಲಾವಿದನೋರ್ವ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಾಸ್ಯದ ಸಂದರ್ಭದ ಸಂಭಾಷಣೆಯಲ್ಲಿ ಬಳಸಿದ್ದ  ಹಿನ್ನೆಲೆಯಲ್ಲಿ  ಹಾಸ್ಯ ಕಲಾವಿದನನ್ನು ಮೇಳದಿಂದ ಆಡಳಿತ ಮಂಡಳಿ ಒಂದು ವಾರಗಳ ಕಾಲ ಮೇಳದಿಂದ ಅಮಾನತು ಮಾಡಿದೆ.

ಪೂರ್ಣೇಶ್ ಅಮಾನತಿಗೆ ಒಳಗಾದ ಹಾಸ್ಯ ಕಲಾವಿದ ಎಂದು ಗುರುತಿಸಲಾಗಿದೆ.

ಇನ್ನು ಈ ಯಕ್ಷಗಾನದಲ್ಲಿ ಬಳಸಿದ್ದ ಹಾಸ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸುದ್ದಿಯಾಗುತ್ತಿದ್ದಂತೆ ಚುನಾವಣಾ ಆಯೋಗದ ಕಣ್ಣು ಯಕ್ಷಗಾನದ ಮೇಲೂ ಬಿದ್ದಿತ್ತು. ಹೀಗಾಗಿ ಕಟೀಲು ಮೇಳಕ್ಕೆ ಚುನಾವಣೆ ಆಯೋಗವೂ ಈ ಸಂಬಂಧ ನೋಟಿಸ್ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಳ ಕಲಾವಿದನನ್ನು ಒಂದು ವಾರಗಳ ಕಾಲ ಅಮಾನತು ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಲಾವಿದ ಪೂರ್ಣೇಶ್, ಎಪ್ರಿಲ್ 1ರಂದು ನಾನು ಸುಳ್ಯದ ಐವರ್ನಾಡಿನಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿದ್ದೆ. ಆದರೆ ‘ಇವನರ್ವ’ ಪದದ ಸಂಭಾಷಣೆಯನ್ನು ತಾನು ಬಳಸಿದ್ದು ಮಾ. 24ರಂದು ಕೇರಳದ ಮಾನ್ಯ ಎಂಬಲ್ಲಿ ನಡೆದ ಯಕ್ಷಗಾನದಲ್ಲಿ. ಅಂದರೆ ಈ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಮಾ.27ಕ್ಕಿಂತ ಮೊದಲು ನಡೆದಿದೆ. ಆದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ  ಎಂದು ಸಮರ್ಥಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *