ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದ ವಾರ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿ `ಒಡೆದಾಳುವ’ ನೀತಿಯ ಹೀನ ರಾಜಕಾರಣವನ್ನು ಪ್ರದರ್ಶಿಸಿತು. ಶೈವ ಉಪಾಸಕರಾದ ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಉಪಾಸನಾ ಪದ್ಧತಿಗೆ ಅಂದರೆ ಲಿಂಗಾಯತ ಭಕ್ತಿ ಪಂಥಕ್ಕೆ ಸ್ವತಂತ್ರ್ಯ ಧರ್ಮದ ಸ್ಥಾನಮಾನ ನೀಡಿ ಹಿಂದೂ ಧರ್ಮೀಯರ ನಡುವೆ ಒಡಕುಂಟು ಮಾಡಲು ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಪ್ರಯತ್ನಿಸಿದರು. ಈ ತೀರ್ಮಾನವನ್ನು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ರಾಜಕೀಯ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ವಿಷಯದಲ್ಲಿ ವಿವೇಚನೆಯುಳ್ಳ ಲೇಖನ
ಶಿವನ ಉಪಾಸನೆ ಮಾಡುವ ಸಮಾಜ ಇತರ ಧರ್ಮೀಯದವರು ಹೇಗಾಗುತ್ತಾರೆ ?
ಲಿಂಗಾಯತ ಸಮಾಜವು ಶಿವನ ಉಪಾಸನೆ ಮಾಡುವ ಸಮಾಜವಾಗಿದೆ. ಶೈವರು ಹಾಗೂ ವೈಷ್ಣವರು ಇವೆರಡೂ ಹಿಂದೂ ಧರ್ಮದ ಎರಡು ಪ್ರಮುಖ ಸಂಪ್ರದಾಯಗಳು. ಲಿಂಗಾಯತ ಸಮಾಜ ಹಾಗೂ ಇತರ ಉಪಾಸನೆ ಪದ್ಧತಿಯಲ್ಲಿ ಕೆಲವು ವ್ಯತ್ಯಾಸಗಳಿವೆ. ಲಿಂಗಾಯತರಲ್ಲಿ ಮೂರ್ತಿ ಪೂಜೆಯಿಲ್ಲದಿದ್ದರೂ ಇಷ್ಟಲಿಂಗದ ಪೂಜೆ ಮಾಡಲಾಗುತ್ತದೆ. ಆ ವ್ಯತ್ಯಾಸದ ಬಗ್ಗೆ ಸ್ವತಂತ್ರ್ಯವಾಗಿ ವಿಮರ್ಶೆ ಮಾಡಬಹುದು; ಆದರೆ ಕೆಲವು ಪದ್ಧತಿಗಳಲ್ಲಿ ವ್ಯತ್ಯಾಸವಿದೆ. ಆದ್ದರಿಂದ ಆ ಸಮಾಜವು ಪ್ರತ್ಯೇಕ ಧರ್ಮವಾಗಲು ಹೇಗೆ ಸಾಧ್ಯ? ಮಹಾರಾಷ್ಟ್ರದಲ್ಲಿಯೂ ವಾರಕರಿ ಸಂಪ್ರದಾಯ, ಸಮರ್ಥ ಸಂಪ್ರದಾಯ ಇತ್ಯಾದಿ ಸಂಪ್ರದಾಯಗಳಿವೆ. ಈ ಸಂಪ್ರದಾಯದಲ್ಲಿನ ಅನುಯಾಯಿಗಳ ಸಾಧನಾಮಾರ್ಗದಲ್ಲಿ ವಿಭಿನ್ನತೆಯಿದೆ; ಆದರೆ ಆ ಕಾರಣಕ್ಕಾಗಿ ಅವರು ಸ್ವತಂತ್ರ್ಯ ಧರ್ಮವಾಗಲು ಸಾಧ್ಯವಿಲ್ಲ. ನಿಜವಾಗಿ ನೋಡಿದರೆ ಲಿಂಗಾಯತ ಇದು ಒಂದು ರೀತಿ ಶಿವನ ಭಕ್ತಿ ಮಾಡಲು ಕಲಿಸುವ ಭಕ್ತಿ ಸಂಪ್ರದಾಯವಾಗಿದೆ. ಹಿಂದೆ ವೀರಶೈವ ಹಾಗೂ ಲಿಂಗಾಯತರನ್ನು ಒಂದೇ ಸಮಾಜದವರೆಂದು ತಿಳಿಯಲಾಗುತ್ತಿತ್ತು; ಆದರೆ ಕಾಲಾಂತರದಲ್ಲಿ ಅವರ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆಸಲಾಯಿತು. ಎಲ್ಲ ಭಕ್ತಿ ಸಂಪ್ರದಾಯಗಳು `ಸನಾತನ ವೈದಿಕ ಹಿಂದೂ ಧರ್ಮ’ವೆಂಬ ಒಂದೇ ಆಲದ ಮರದ ಶಾಖೆಗಳಾಗಿವೆ; ಆದರೆ ಕೇವಲ ಸ್ವಾರ್ಥ ಹಾಗೂ ಪರಕೀಯ ಶಕ್ತಿಯ ಷಡ್ಯಂತ್ರಕ್ಕೆ ಬಲಿಯಾಗಿ ಒಂದೊಂದೇ ಶಾಖೆಯನ್ನು ಮೂಲ ವೃಕ್ಷದಿಂದ ಕತ್ತರಿಸುವ ಪ್ರಯತ್ನಗಳು ನಡೆಯುತ್ತಿದೆ.

0d8af8d7-6b37-4c0a-98f3-46090bd68007
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ನಿರ್ಣಯ
ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಲು ಪ್ರತ್ಯೇಕತಾವಾದಿ ವಿಚಾರ ಸರಣಿಯ ಜನರ ಬೇಡಿಕೆ ಇರಬಹುದು. ಆದರೂ ವೀರಶೈವ ಸಂಪ್ರದಾಯವು ಈ ತೀರ್ಮಾನವನ್ನು ರಸ್ತೆಗೆ ಇಳಿದು ವಿರೋಧಿಸಿದೆ. ವೀರಶೈವ ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಹೀರೆಮಠ ಸಹಿತ ಹಲವರು ಇದನ್ನು `ರಾಜಕೀಯ ತೀರ್ಮಾನ’ವೆಂದು ದೂಷಿಸಿದ್ದಾರೆ. ಸ್ವತಂತ್ರ್ಯ ಧರ್ಮದ ಬೇಡಿಕೆ ಸರಿಯೋ ತಪ್ಪೋ, ಎಂಬುದನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ ದಾಸರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು; ಆದರೆ ಈ ಸಮಿತಿಯಲ್ಲಿ ಧಾರ್ಮಿಕ ಕ್ಷೇತ್ರದವರಾಗಲಿ ಅಥವಾ ಕನ್ನಡನಾಡು ಪರಂಪರೆಯವ ಮಾಹಿತಿಯಿರುವವರಾಗಲಿ ಒಬ್ಬ ವ್ಯಕ್ತಿಯೂ ಇರಲಿಲ್ಲ. ಅಂತಹ ಸಮಿತಿಯು ಶಿಫಾರಸು ಸೂಚಿಸಿತು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಒಪ್ಪಿಕೊಂಡರು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಲಿಂಗಾಯತ ಸಮಾಜವು ದೊಡ್ಡ ಸಂಖ್ಯೆಯಲ್ಲಿದೆ. `ಅಲ್ಪಸಂಖ್ಯಾತರ ಧರ್ಮಕ್ಕೆ’ ಸಿಗಲಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಲಾಭವನ್ನು ಕಬಳಿಸಲು ಸ್ವತಂತ್ರ್ಯ ಧರ್ಮದ ಬೇಡಿಕೆ ವ್ಯವಸ್ಥಿತವಾಗಿ ಮುಂದೆ ತರಲಾಯಿತು. ಅದಕ್ಕಾಗಿ ಅನೇಕ ಗುಂಪುಗಳು ಸಹ ಕಾರ್ಯನಿರತವಾಗಿತ್ತು, ಇವರು ವೀರಶೈವ ಲಿಂಗಾಯತರ ಬುದ್ಧಿಯನ್ನು ಬದಲಾಯಿಸಿ `ನಾವೆಲ್ಲಾ ಹಿಂದೂ ಧರ್ಮದಿಂದ ಭಿನ್ನವಾಗಿದ್ದೇವೆ’, ಎಂದು ಹೇಳುವ ಪ್ರಯತ್ನ ನಡೆಸುತ್ತಿದ್ದರು. ಹಿಂದೂ ಧರ್ಮದ ಭಕ್ತಿ ಸಂಪ್ರದಾಯಗಳ ನಡುವೆ ಈ ರೀತಿಯ ಅಲ್ಪಸಂಖ್ಯಾತವಾದ ನಿರ್ಮಾಣವಾಗುವುದು ಒಂದು ಚಿಂತೆಯ ವಿಷಯಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಧಾರ್ಮಿಕ ತೀರ್ಮಾನವನ್ನು ತೆಗೆದುಕೊಳ್ಳುವ ರಾಜಕಾರಣಿಗಳು ಅದಕ್ಕಾಗಿ ಕಾರಣೀಭೂತರಾಗಿದ್ದಾರೆ.
ಧಾರ್ಮಿಕ್ಷೇತ್ರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವನ್ನು ತಡೆಯುವುದು ಆವಶ್ಯಕ !
ಯಾರು ಯಾವ ವಿಷಯದಲ್ಲಿ ತಜ್ಞರಾಗಿರುವರೋ ಅಥವಾ ಅಧಿಕಾರಿಗಳಾಗಿರುವರೋ, ಅವರೇ ಆ ವಿಷಯದ ಮೇಲೆ ಭಾಷ್ಯ ಮಾಡುವುದು ಅಥವಾ ತೀರ್ಮಾನಿಸುವುದು ವ್ಯವಹಾರಿಕ ನಿಯಮ. ಯಾವ ವಿಷಯದ ಬಗ್ಗೆ ಜ್ಞಾನವಿಲ್ಲವೋ, ಆ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುವುದೆಂದರೆ ಬೇರೆಯವರ ಕ್ಷೇತ್ರದಲ್ಲಿ ಕೈಯಾಡಿಸಿದಂತಾಗುವುದು, ಅಂದರೆ ಮಧ್ಯ ಪ್ರವೇಶಿಸಿದಂತೆ ಎಂದು ವ್ಯವಹಾರಿಕ ಭಾಷೆಯಲ್ಲಿ ತಿಳಿಯಲಾಗುವುದು. ಈಗ ಈ ರೀತಿಯ ಹಸ್ತಕ್ಷೇಪ ರಾಜಾರೋಷವಾಗಿ ನಡೆಯುತ್ತಿದೆ. ಯಾವುದೇ ರಾಜಕೀಯ ಪಕ್ಷವು ಇದಕ್ಕೆ ಅಪವಾದವಲ್ಲ. ತಮ್ಮ ವ್ಯಾಪ್ತಿಗೆ ಬರದಂತಹ ವಿಷಯವನ್ನು ಮನಸ್ಸಿಗೆ ಬಂದಂತೆ ಮಾಡುವುದು ಹಾಗೂ ಕರ್ತವ್ಯವನ್ನು ಮಾತ್ರ ನಿಭಾಯಿಸುವುದಿಲ್ಲ, ಇದು ಪ್ರಸ್ತುತ ರಾಜಕಾರಣಿಗಳ ಸ್ವಭಾವವಾಗಿದೆ. ರಾಜಕಾರಣಿಗಳ ವ್ಯಾಪ್ತಿಗೆ ಯಾವ ವಿಷಯ ಬರುತ್ತದೆ, ಯಾವುದು ಇಲ್ಲ, ರಾಜಕಾರಣಿಗಳ ಕರ್ತವ್ಯ ಯಾವುದು, ಅವರ ಮಿತಿಯೇನು, ಯಾವುದಾದರೂ ಕಠಿಣ ಪ್ರಸಂಗದಲ್ಲಿ ರಾಜ್ಯ ಪ್ರಮುಖರು ತೀರ್ಮಾನ ಪ್ರಕ್ರಿಯೆಯನ್ನು ಹೇಗೆ ತೆಗೆದುಕೊಳ್ಳುವುದು, ಎಂಬುದಕ್ಕೆ ಕೆಲವು ಕಾನೂನುಬದ್ಧ ಹಾಗೂ ನೈತಿಕ ನಿಯಮಗಳಿವೆ. ಪ್ರಸ್ತುತ ಎಲ್ಲ ಕಡೆಗಳಲ್ಲಿಯೂ ಗೊಂದಲ ನಡೆಯುತ್ತಿದೆ. ದೇಶದ ಪ್ರಧಾನಸೇವಕರು ಒಮ್ಮೆ ತುಂಬಿದ ಸಂಸತ್ತಿನಲ್ಲಿ, `ಸಂವಿಧಾನವೇ ಭಾರತದ ಧರ್ಮಗ್ರಂಥ’ವಾಗಿದೆ, ಎಂದಿದ್ದರು. ಸನಾತನ ಧರ್ಮದಲ್ಲಿ ವೇದ, ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ, ಮಹಾಭಾರತ, ರಾಮಾಯಣ ಇತ್ಯಾದಿ ಅನೇಕ ವಿಧದ ಧರ್ಮಗ್ರಂಥಗಳಿರುವಾಗ ಅವುಗಳನ್ನು ಧರ್ಮಗ್ರಂಥಗಳೆಂದು ಸಂಬೋಧಿಸದೆ ಯಾವುದೋ ಒಂದು ರಾಜನೀತಿಯ ಕಾಗದಪತ್ರವನ್ನು `ಧರ್ಮಗ್ರಂಥ’ವೆಂದು ಸಂಬೋಧಿಸುವುದು ಸನಾತನ ಧರ್ಮದಲ್ಲಿ ಅದನ್ನು ಪರಮ ನಾಸ್ತಿಕತೆಯ ಲಕ್ಷಣವೆಂದು ತಿಳಿದುಕೊಳ್ಳಲಾಗುತ್ತದೆ. ಅದೇ ಕಾರ್ಯವನ್ನು ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಲು ನೋಡುತ್ತಿದ್ದಾರೆ. ಇಂದು ಭಾಜಪವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನಕ್ಕೆ ತನ್ನ ವಿರೋಧವನ್ನು ತೋರಿಸಿದೆ. ಈ ಹಿಂದೆ ಧಾರ್ಮಿಕ ಅಸ್ಮಿತೆ ಇದೆಯೇ ಅಥವಾ ಅದು ರಾಜಕೀಯ ಸಮೀಕರಣವೇ ಎಂಬ ವಿಷಯದಲ್ಲಿ ನಿಶ್ಚಿತವಾಗಿ ಭಾಷ್ಯೆ ಮಾಡಲು ಸಾಧ್ಯವಿಲ್ಲ; ಆದರೆ ನಾಳೆ ಅವರೇನು ಮಾಡಲಿದ್ದಾರೆ, ಎಂಬುದಕ್ಕೆ ಭರವಸೆಯೇನು?
ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಈ ಪ್ರಯತ್ನವನ್ನು ನಾಶ ಮಾಡಬೇಕೆಂದರೆ ಸಕಲ ಹಿಂದೂ ಸಮಾಜವು ಸಂಘಟಿತವಾಗುವುದು ಆವಶ್ಯಕವಾಗಿದೆ. `ಧರ್ಮದ ವಿಷಯದಲ್ಲಿ ತೀರ್ಮಾನ ಮಾಡಲು ಧರ್ಮಾಚಾರ್ಯರು ಸಮರ್ಥರಾಗಿದ್ದಾರೆ’, ಎಂಬ ಹಿಂದೂಗಳ ಕೂಗು ಬಲವಾದಾಗ ಮಾತ್ರವಷ್ಟೇ ರಾಜಕಾರಣಿಗಳು ಧಾರ್ಮಿಕ ಕ್ಷೇತ್ರದಲ್ಲಿಅವರ ಹಸ್ತಕ್ಷೇಪ ನಿಲ್ಲಿಸುವರು.

By suddi9

Leave a Reply

Your email address will not be published. Required fields are marked *