040418_biruver

ಮಂಗಳೂರು: ಐದು ತಿಂಗಳ ಹಿಂದೆ ಕಟೀಲು 5ನೇ ಮೇಳದ ಉಚ್ಚಾಟಿತ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರ್ಪಡೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ  ಬಿರುವರೆ ಕುಡ್ಲ ಸಂಘಟನೆಯ ನಿತೇಶ್ ಮಾರ್ನಾಡ್  ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಟೀಲು ಮೇಳದಲ್ಲಿ ಕಳೆದ 25 ವರ್ಷಗಳಿಂದ ಹಿಮ್ಮೇಳ ಮುಮ್ಮೇಳ ರಂಗದಲ್ಲಿ ಪಾತ್ರದಾರಿಗಳಾಗಿ ಸೇವೆ ಸಲ್ಲಿದ ಎಂಟು ಕಲಾವಿದರನ್ನು ಕ್ಷುಲಕ ಕಾರಣಕ್ಕಾಗಿ ಉಚ್ಚಾಟಿಸಿದ್ದಾರೆ. ಅವರ ಪರವಾಗಿ ನಮ್ಮ ಹೋರಾಟ ಎಂದರು.

ಈ ಹಿಂದೆ 5ನೇ ಮೇಳದ ಪ್ರಧಾನ ಭಾಗವತ ರನ್ನ ವರ್ಗಾಯಿಸಲು ಪ್ರಸ್ತಾಪಿಸಲಾಗಿತ್ತು. ಹೀಗಾಗಿ ಕಲಾವಿದರು ಮನವಿ ಸಲ್ಲಿಸಲು ಹೋಗಿದ್ದರು,ಆದರೆ ಭೇಟಿಗೆ ಅವಕಾಶ ನೀಡಲಿಲ್ಲ.ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮೇಳದಲ್ಲಿ ಅಶಿಸ್ತಿನ ಕಾರಣ ಹೇಳಿ ಏಕಾಏಕಿ ಮೇಳದ 8 ಮಂದಿ ಕಲಾವಿದರನ್ನ ಉಚ್ಚಾಟಿಸಲಾಗಿತ್ತು. ಕಲಾವಿದರು ಆಡಳಿತ ಮಂಡಳಿಯಲ್ಲಿ ಕ್ಷಮೆ ಕೇಳಲು ಮುಂದಾಗಿದ್ದರೂ, ಆ ಕಲಾವಿದರನ್ನು ಉಚ್ಚಾಟನೆ ಮಾಡಿದ್ದರು. ಕಲಾವಿದರ ಮನವಿ ಸ್ವೀಕರಿಸದೇ ಕಟೀಲು ಮೇಳದ ಯಜಮಾನ ದೇವಿಪ್ರಸಾದ್ ಶೆಟ್ಟಿ ಕಲಾವಿದರನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ  ಬಿರುವೆರ್ ಕುಡ್ಲ ಸಂಘಟನೆಯ ವಿದ್ಯಾ ರಾಕೇಶ್, ಉಜಿರೆ ನಾರಾಯಣ, ಶಿವ ಶಂಕರ್, ಮಹಾಬಲ ರೈ, ರಾಕೇಶ್ ರೈ, ರವೀಶ್ ಕುಂಬಳೆ, ಪ್ರಶಾಂತ್ ರೈ, ಗೋವಿಂದ್ ನಾಯ್ಕ, ಗುರು ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *