shah-098

ತಿಪಟೂರು: ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.

ನಗರದ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಬಿಜೆಪಿ ತೆಂಗು ಬೆಳಗಾರರ ಪ್ರಕೋಷ್ಠ ಹಮ್ಮಿಕೊಂಡಿದ್ದ ತೆಂಗು ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ, ವೀರಶೈವರ ಹೆಸರಿನಲ್ಲಿ ಇಡೀ ಸಮುದಾಯವನ್ನೇ ಒಡೆದು ಆಳಲು ಹೊರಟಿದ್ದು, ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ಯಾವ ರಾಜ್ಯಗಳಲ್ಲೆಲ್ಲಾ ಇದೆಯೋ ಅಲ್ಲೆಲ್ಲಾ ರೈತರ ಅತ್ಮಹತ್ಯೆಗಳು ಹೆಚ್ಚಿವೆ. ರೈತರನ್ನು ಕೊಲ್ಲುವುದೇ ಇವರ ಪ್ರಣಾಳಿಕೆ ಇದ್ದಂತಿದೆ. ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆದು, ಬಿಜೆಪಿ ಸರಕಾರ ಬಂದ ಮೇಲೆ ರೈತರ ಅತ್ಮಹತ್ಯೆಗಳು ಕಡಿಮೆಯಾಗುತ್ತಿವೆ. ಕರ್ನಾಟಕ ಇಂದು ಭ್ರಷ್ಟಾಚಾರದಲ್ಲಿ ನಂ1 ರಾಜ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಈ ಸರಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಬೆಂಬಲಿಸಿ ಎಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಮಾತನಾಡಿ, ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಮೊದಲಿನಿಂದಲೂ ತೆಂಗು ಬೆಳೆಯಲಾಗುತ್ತಿತ್ತು. ಇಂದು 19 ರಾಜ್ಯಗಳಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದೆ. ಆದರೆ ಇಂದು ರಾಜ್ಯದಲ್ಲಿರುವ ತೀವ್ರ ಬರಗಾಲ ಹಾಗೂ ಅನೇಕ ರೋಗಗಳಿಂದ ತೆಂಗು ನಾಶದ ಹಾದಿ ಹಿಡಿದಿದೆ. ಇದಕ್ಕೆ ಬರೆಹಾಕಿದಂತೆ ಸರಿಯಾದ ಬೆಲೆ ಕೂಡ ರೈತರಿಗೆ ಸಿಗದ ಕಾರಣ ತೆಂಗು ಬೆಳೆಗಾರರು ನಾಶವಾಗುವ ಹಂತ ತಲುಪುವಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ವೈಜ್ಞಾನಿಕ ಬೆಲೆ ಕೊಟ್ಟು, ತೆಂಗು ಸಂಶೊಧನ ಕೇಂದ್ರ ಹಾಗೂ ತೆಂಗಿಗೆ ಒಳ್ಳೆಯ ಮಾರುಕಟ್ಟೆಗೆ ಒತ್ತು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್, ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಂಸದ ಜಿ.ಎಸ್ ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿ.ಎಲ್ ಸಂತೋಷ್, ತಾ.ಅಧ್ಯಕ್ಷ ಎಚ್.ಬಿ ದಿವಾಕರ್, ನ.ಅಧ್ಯಕ್ಷ ಲೋಕೇಶ್, ಚಿ.ನಾ ಹಳ್ಳಿ ಮಾಜಿ ಶಾಸಕ ಕಿರಣ್‍ಕುಮಾರ್ ಹಾಗೂ ಬಿಜೆಪಿಯ ಕಾರ್ಯಕರ್ತರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *