ಕೈಕಂಬ: ಸೂರಲ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಮುಖ್ಯ ಶಿಕ್ಷಕಿ ಜಯಂತಿ .ಕೆ. ಇವರ ಸನ್ಮಾನ ಸಮಾರಂಭವು ಸ.ಹಿ.ಪ್ರಾ. ಶಾಲೆ ಸೂರಲ್ಪಾಡಿಯಲ್ಲಿ ಇತ್ತೀಚೆಗೆ ನಡೆಯಿತು.
ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಶಿಕ್ಷಕಿ, ಭವಾನಿ ಎಲ್ಲರನ್ನು ಸ್ವಾಗತಿಸಿ. ಗಂಜಿಮಠ ಕ್ಲಸ್ಟರಿನ ಸಿ.ಆರ್.ಪಿ. ಶೀಲಾವತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಎಲ್ಲಾ ಗಣ್ಯರು ಸೇರಿ ನಿವೃತ್ತ ಶಿಕ್ಷಕಿಗೆ ಸನ್ಮಾನ ಗೈದರು. ಸಹಶಿಕ್ಷಕಿ ಸಿಂತಿಯಾರವರು ಸನ್ಮಾ ನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಝಾಕೀರ್, ಶಾಲಾ ಗೌರವಧ್ಯಕ್ಷರು ಅಬ್ದುಲ್ ಮಜೀದ್, ತಾಲೂಕು ಪಂಚಾಯತ್ ಸದಸ್ಯ ಸುನಿಲ್, ಕೆ.ಡಿ.ಪಿ. ಸದಸ್ಯ ಗಣೇಶ್, ಗ್ರಾ.ಪಂ. ಸದಸ್ಯರಾದ ದುಲ್ಸಿನ್ ಕ್ರಾಸ್ತಾ, ಸಮೀರ್, ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಮೀನಾಕ್ಷಿ, ಮಾಜಿ ಶಿಕ್ಷಣ ತಜ್ಞೆ ಜಸಿಂತಾ, ಶಿಕ್ಷಕರ ಸಂಘದ ಉಪಾಧ್ಯಕ್ಷ ಸುರೇಶ್ ರಾವ್, ಸದಸ್ಯರಾದ ಪ್ರಮೋದ್, ಸ್ಥಳೀಯ ಉದ್ಯಮಿಗಳಾದ ನೌಶದ್, ಹಮೀದ್, ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಶಿಕ್ಷಕಿಯ ಸಾಧನೆಯ ಬಗ್ಗೆ ಶ್ಲಾಘಿಸುತ್ತಾ ಅಭಿನಂದನೆ ಸಲ್ಲಿಸಿದರು. ಕಣ್ಣೋರಿ ಕ್ಲಸ್ಟರಿನ ಸಿ.ಆರ್.ಪಿ. ಪುಷ್ಪಾವತಿ ವಂದನಾರ್ಪಣೆಗೈದರು. ಗುರುಕಂಬ್ಳ ಉರ್ದು ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಕರಾದ ಪ್ರಮೋದ್ ಕಾರ್ಯಕ್ರಮ ನಿರೂಪಿಸಿ. ಸ್ಥಳೀಯ ಉದ್ಯಮಿ ನೌಶದ್ ಹಾಗೂ ಅಬ್ದುಲ್ ಮಜೀದ್ ಕಾರ್ಯಕ್ರಮದ ಆಯೋಜನೆ ಮಾಡಿಸಿದ್ದರು.
