Femina-Miss-India-2018-Auditions-and-Online-Registration-Open

ಬೆಂಗಳೂರು: ಪ್ರತಿಭಾ ಸೌಂಶಿಮಠ್ ಆಯೋಜಿಸಿಸಿರುವ ಮಿಸೆಸ್ ಇಂಡಿಯಾ ಕರ್ನಾಟಕ 2018ರ ಫೈನಲ್ ಮಾ. 24ರಂದು ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್ ನಲ್ಲಿ ನಡೆಯಲಿದೆ.

ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಾಮರ್ಥ್ಯ, ಪ್ರತಿಭೆ ಹಾಗೂ ಸೌಂದರ್ಯದ ಮೂಲಕ ತೀವ್ರ ಸ್ಪರ್ಧೆ ಒಡ್ಡಲಿದ್ದಾರೆ.

ಭಾಗವಹಿಸಿದ ಎಲ್ಲರಿಗೂ ಸಂಘಟಕರು ಸ್ಪರ್ಧೆಯ ನೀತಿ ನಿಯಮಗಳನ್ನು ವಿವರಿಸಲಿದ್ದು, ಆಡಿಷನ್ ಪ್ರಾರಂಭವಾದ ನಂತರ ಸ್ಪರ್ಧಿಗಳಿಗೆ ಕ್ಯಾಟ್ ವಾಕ್ ನಡೆಸಿ ತಮ್ಮ ಪರಿಚಯ ಹೇಳಿಕೊಳ್ಳಲು ಸೂಚಿಸಲಾಗುತ್ತದೆ. ಮತ್ತು ನಂತರ ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರಿಸಬೇಕಾಗುತ್ತದೆ.

ಮಿಸೆಸ್ ಇಂಡಿಯಾ ಕರ್ನಾಟಕ -2018ರ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲು ಹಮ್ಮಿಕೊಳ್ಳಲಾಗಿದ್ದ ಆಡಿಷನ್​ ನಲ್ಲಿ 132 ಮಹಿಳೆಯರು ಪಾಲ್ಗೊಂಡಿದ್ದರು, ಈ ಪೈಕಿ 32 ಜನರು ರಾಜ್ಯ ಮಟ್ಟದ ಫೈನಲ್ಸ್​ಗೆ ಆಯ್ಕೆ ಆಗಿದ್ದಾರೆ. ವಯಸ್ಸಿನ ಸಾಟಿಯೂ ಇಲ್ಲದಂತೆ ಅನೇಕರು ಕಠಿಣ ಸ್ಪರ್ಧೆಯನ್ನು ಒಡ್ಡಲು ಸಜ್ಜಾಗಿದ್ದಾರೆ.

ಫೋಟೊಜೆನಿಕ್, ಡೀವಾ, ಗ್ಲ್ಯಾಮರಸ್, ಇನ್‌ಸ್ಪಿರೇಷನಲ್, ಬೆಸ್ಟ್ ವಾಕ್, ಬೆಸ್ಟ್ ಸ್ಮೈಲ್, ಇನ್ನರ್ ಬ್ಯೂಟಿ, ಬ್ಯೂಟಿಫುಲ್ ಐಸ್, ಇಂಟಲೆಕ್ಚುವಲ್, ಬೆಸ್ಟ್ ಪರ್ಫಾರ್ಮರ್, ಟಾಲೆಂಟ್ ಕ್ವೀನ್, ಫಿಟ್ ನೆಸ್ ಕ್ವೀನ್, ಕ್ರಿಯೇಟಿವ್ ಕ್ವೀನ್ ಹೀಗೆ ಒಟ್ಟು 20 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. 22ರಿಂದ 40 ವರ್ಷ, 41ರಿಂದ 60 ವರ್ಷ ಹಾಗೂ 60 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 22-40 ವರ್ಷದ ವಿಭಾಗ ದಲ್ಲಿ 90 ಜನ , 40-60 ವರ್ಷ ವಿಭಾಗದಲ್ಲಿ 40 ಜನ ಹಾಗೂ 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಇಬ್ಬರು ಭಾಗವಹಿಸಿದ್ದಾರೆ. 60 ವರ್ಷ ಮೇಲ್ಪಟ್ಟಿರುವ ಇಬ್ಬರನ್ನೂ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಶನಿವಾರ ನಡೆದ ಆಡಿಷನ್ಸ್​ನಲ್ಲಿ ಕ್ಯಾಟ್​ವಾಕ್ ಮಾಡಿದ ಸ್ಪರ್ಧಿಗಳು ನಂತರ ತೀರ್ಪಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. 132 ಜನ ಭಾಗವಹಿಸಿದ್ದರಿಂದ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

By suddi9

Leave a Reply

Your email address will not be published. Required fields are marked *