ಛತ್ತರಪುರ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ ಸಂಕಲ್ಪವಾಗಿದ್ದು, ಇದನ್ನು ಮಾಡಿಯೇ ತಿರುತ್ತೇವೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಛರಿಸಿದ್ದಾರೆ.
ನಗರದ ಮೌಸಹಾನಿಯಾದಲ್ಲಿ ಮೋಹನ್ ಭಾಗವತ್ 52 ಅಡಿ ಉದ್ದದ ಮಹಾರಾಜ ಛತ್ರಾಸಲ್ರವರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ-ನಿಮ್ಮ ಬಯಕೆಯಷ್ಟೇ ಅಲ್ಲ ಸಂಕಲ್ಪ, ಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಇಚ್ಛಿಸುವರು ರಾಮ ನಡೆದ ಹಾದಿಯನ್ನೇ ಅನುಸರಿಸಬೇಕು ಎಂದರು.
ಮಹಾರಾಜ ಛತ್ರಸಾಲ್ರವರು ಶ್ರೇಷ್ಠ ವೀರ ಸೇನಾನಿಯಾಗಿದ್ದರು. ಸಣ್ಣ ಸೇನೆಯ ನೆರವಿನೊಂದಿಗೆ ಅವರು ಶತ್ರುಗಳನ್ನು ಮಣಿಸಿದರು ಎಂದು ಭಾಗವತ್ ಸ್ಮರಿಸಿದರು.

