ರಾಂಚಿ(ಜಾರ್ಖಂಡ): ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ ಪಾಲ್ಗೊಂಡಿರುವ ದುಮ್ಕಾ ಖಜಾನೆ ಹಗರಣ ಪ್ರಕರಣದ ತೀರ್ಪನ್ನು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಮಾರ್ಚ 19 ಕ್ಕೆ ಮುಂದೂಡಿದೆ.
ಈ ನಾಲ್ಕನೇ ಮೇವು ಹಗರಣ ಕುರಿತಂತೆ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಬೇಕಿತ್ತು.
ಮೂರು ಮೇವು ಹಗರಣಗಳಿಗೆ ಸಂಬಂಧಿಸಿದಂತೆ ಲಾಲು ಈಗಾಗಲೇ 13.5 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದು ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.
ಲಾಲು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದುಮ್ಕಾ ಖಜಾನೆಯಿಂದ 3.13 ಕೋಟಿ ರೂ. ಅಕ್ರಮವಾಗಿ ತೆಗೆದ ಪ್ರಕರಣದ ಬಗ್ಗೆ ಈಗ ತೀರ್ಪು ಹೊರಬೀಳಬೇಕಿದೆ.
ಲಾಲೂ ಜತೆಗೆ ಬಿಹಾರದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ, ಹಿಂದಿನ ಐಎಎಸ್ ಅಧಿಕಾರಿ ಸೇರಿದಂತೆ ಇತರೆ 29 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

