kurukhhetra-darshan

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುಮಾಡಿರುವ ಚಿತ್ರತಂಡ ಗ್ರಾಫಿಕ್ಸ್ ಕೆಲಸ ಮಾಡುತ್ತಿದೆ.

ಸದ್ಯ, ಅಭಿಮಾನಿಗಳಿಗೆ ಗುಡ್ ನ್ಯೂಸ್ ಏನಪ್ಪ ಅಂದರೆ, ಮಾರ್ಚ್ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಭರದ ಸಿದ್ದತೆ ನಡೆಸಿದೆ ಚಿತ್ರತಂಡ. ಸದ್ಯ, ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮಾರ್ಚ್ ಕೊನೆಯ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ. ಕುರುಕ್ಷೇತ್ರ ಬರೋದಾದರೆ ಈ ತಿಂಗಳಲ್ಲಿ ಬರಬೇಕು, ಇಲ್ಲವಾದಲ್ಲಿ ಅಭಿಮಾನಿಗಳು ಚುನಾವಣೆ ಮುಗಿಯುವ ತನಕ ಕಾಯಬೇಕು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ,ರವಿಚಂದ್ರನ್ ನಿಖಿಲ್ ಕುಮಾರ್ ಅಂಬರೀಶ್, ಸೋನು ಸೂದ್,ಶಶಿಕುಮಾರ್, ಶ್ರೀನಾಥ್, ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ನಟಿಸಿದ್ದಾರೆ.

By suddi9

Leave a Reply

Your email address will not be published. Required fields are marked *