ಸುದ್ದಿ9ಬಂಟ್ವಾಳ:ರಾಜ್ಯದಲ್ಲಿ ಬಲಿಷ್ಠ ವರ್ಗ ಮತ್ತು ಉಳ್ಳವರ ನಡುವೆ ಭಾರೀ ವಿರೋಧಗಳ ನಡುವೆಯೂ ಸಮಾಜದಲ್ಲಿ ಹಿಂದುಳಿದ ವರ್ಗ ಸಮುದಾಯದ ಜನತೆಗೆ ನ್ಯಾ ದೊರಕಿಸಿಕೊಟ್ಟ ಏಕೈಕ ಆಶಾಕಿರಣವಾಗಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೂಡಿ ಬಂದಿದ್ದಾರೆ ಎಂದು ಬಿ.ಸಿ.ರೋಡ್ನ ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಹೇಳಿದ್ದಾರೆ. ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಬುಧವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಇವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ದೇರಾಜೆ ಕಾರ್ಯಕ್ರಮ ಉದ್ಘಾಟಿಸಿದ್ದು, ಉಪಾಧ್ಯಕ್ಷೆ ವಿಲಾಸಿನಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಗರಿಷ್ಟ ಅಂಕ ಗಳಿಸಿದ ಇಲ್ಲಿನ ಮೊರಾಜರ್ಿ ದೇಸಾಯಿ ವಸತಿ ಶಾಲೆ ಪ್ರತಿಭಾನ್ವಿತ ವಿದ್ಯಾಥರ್ಿನಿ ಶ್ವೇತಾ ಇವರನ್ನು ಸನ್ಮಾನಿಸಲಾಯಿತು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಸಹಾಯಕ ನಿದರ್ೇಶಕಿ ದಯಾವತಿ, ಸದಸ್ಯರಾದ ಆನಂದ ಎ.ಶಂಭೂರು, ಮಾಧವ ಎಸ್.ಮಾವೆ, ದಿನೇಶ್ ಅಮ್ಟೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ನಗರ ಠಾಣಾಧಿಕಾರಿ ನಂದಕುಮಾರ್ ಉಪಸ್ಥಿತರಿದ್ದರು. ಬಂಟ್ವಾಳ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಜಯಣ್ಣ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾಥರ್ಿ ನಿಲಯ ಪಾಲಕ ಶಿವಣ್ಣ ಸ್ವಾಗತಿಸಿ, ಮೇಲ್ವಿಚಾರಕ ಶೇಷಗಿರಿ ನಾಯಕ್ ವಂದಿಸಿದರು.
