
ತಳಿಪ್ಪರಂಬ್: ಎಸ್ಎಫ್ಐ ಕಾರ್ಯಕರ್ತನಿಗೆ ದುಷ್ಕರ್ಮಿಗಳು ಇರಿದ ಘಟನೆ ಕಣ್ಣೂರಿನ ತಳಿಪ್ಪರಂಬ್ ನಲ್ಲಿ ರವಿವಾರ ನಡೆದಿದೆ.
ತಳಿಪ್ಪರಂಬ್ ಆಲಿಕ್ಕುಂಪ್ಪಾನ ಎಸ್ಎಫ್ ಐ ಕಾರ್ಯಕರ್ತ ಎನ್ವಿ ಕಿರಣ್(19) ಇರಿತೊಕ್ಕಳಗಾದ ಯುವಕ ಎಂದು ಗುರುತಿಸಲಾಗಿದೆ.
ಕಿರಣ್ ಸೇರಿ ಮೂವರು ತೃಚ್ಚಂಬರ ಜಾತ್ರೆಯಿಂದ ಮರಳುವ ವೇಳೆ ದುಷ್ಕರ್ಮಿಗಳು ತಡೆದು ಇರಿದಿದ್ದು, ಅಸ್ವಂತ್, ಅರ್ಜುನ್ ಎಂಬವರೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ತಳಿಪರಂಬ್ ಪೊಲೀಸರು ತಿಳಿಸಿದ್ದು, ಬಂಧಿಸಿದವರ ವಿವರವನ್ನು ಬಹಿರಂಗಪಡಿಸಿಲ್ಲ.
