ಸುದ್ದಿ9ಬಂಟ್ವಾಳ: ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶ್ವ ತುಳುವೆರೆ ಪರ್ಬ 2014 ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಅಗಸ್ಟ್ 24ರಂದು ‘ಬಂಟ್ವಾಳದಲ್ಲಿ ತುಳು ಮಿನದನ’ ಕಾರ್ಯ ಕ್ರಮವು ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಅವರು ಅಧ್ಯಕ್ಷತೆ ವಹಿಸುವರು. ಬಂಟ್ವಾಳ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ,ಶ್ರೀ.ಕ್ಷೇ.ಧ.ಗ್ರಾ.ಬಂಟ್ವಾಳ ಘಟಕದ ಯೋಜನಾಧಿಕಾರಿ ಸುನೀತಾ ನಾಯಕ್ ರವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬಳಿಕ ನಡೆಯುವ ವಿವಿಧ ಗೋಷ್ಟಿಯಲ್ಲಿ ಖ್ಯಾತ ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್,ವಿದ್ವಾಂಸರಾದ ಚೇತನ್ ಮುಂಡಾಜೆ,ಡಾ.ನರೇಂದ್ರ ರೈ ದೇರ್ಲ,ರಮಾ ಎಸ್ ಭಂಡಾರಿರವರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ತಾಲೂಕಿನ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯು ನಡೆಯಲಿದೆ ಎಂದು ವಿವರಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ‘ತುಳುನಾಡ್ದ ಮದಿಮೆದ ಪೊಲರ್ು’ ಎಂಬ ವಿಶೇಷ ಕಾರ್ಯಕ್ರಮ ಜರಗಲಿದೆ. ಮದ್ಯಾಹ್ನದ ಬಳಿಕ ಕಲ್ಲಡ್ಕ ಅಭಿನಯ ಕಲಾವಿದೆರ್ ತಂಡದಿಂದ ‘ತೆಲಿಕೆದ ಗಮ್ಮತ್ತ್’ , ಅರುಣ್ ಚಂದ್ರ ಬಿ.ಸಿ.ರೋಡ್ ಇವರಿಂದ ತೆಲಿಕೆದ ತಮ್ಮನ ಮಂಚಿ ಬೊಲ್ಪು ಕಲಾ ತಂಡದಿಂದ ಜಾನಪದ ಕದಿಕೆ , ಯಕ್ಷಲೋಕ ಸಾಂಸ್ಕೃತಿ ಪ್ರತಿಷ್ಠಾನದಿಂದ ತುಳು ಪದರಂಗೀತೋ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ತಿಳಿಸಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭವು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆರವರು ಅತಿಥಿಯಾಗಿ ಭಾಗವಹಿಸಲಿದ್ದು,ಮುಂಬಯಿ ವಿ.ವಿ.ಯ ವಿಶ್ರಾಂತ ಪ್ರಾದ್ಯಾಪಕ ಡಾ. ತಾಳ್ತಾಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಸಂಯೋಜನೆಯಲ್ಲಿ ತುಳುನಾಡ್ದ ಉದಿಪು ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ನವೆಂಬರ್ನಲ್ಲಿ ಮೂರು ದಿನಗಳ ಕಾಲ ಮಂಗಳೂರಿನ ಪಿಲಿಕುಲದಲ್ಲಿ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬ ಕಾರ್ಯಕ್ರಮಕ್ಕೆ ಪೂರಕವಾಗಿ ಬಂಟ್ವಾಳದಲ್ಲಿ ತುಳು ಮಿನದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಪ್ರೊ.ತುಕರಾಮ್ ಪೂಜಾರಿ,ಸುದರ್ಶನ್ ಜೈನ್ ,ಕಯೂರು ನಾರಾಯಣ ಭಟ್,ಸೀತಾರಾಮ ಶೆಟ್ಟಿ,ಎಂ.ಪರಮೇಶ್ವರ,ಮಂಜುವಿಟ್ಲ,ಬಿ.ಕೆ.ಇದ್ದಿನಬ್ಬ,ಮದೂಸೂದನ್ ಶೆಣೈ ಮೊದಲಾದವರಿದ್ದರು.
